ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು : ರೋಗಿಗಳಿಗೆ ಸೂಕ್ತ ಸಮಯದಲ್ಲಿ ರಕ್ತ ದೊರಕುವ ನಿಟ್ಟಿನಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ` ರಕ್ತ ಸಂಜೀವಿನಿ ವೆಬ್ ಸೈಟ್’ ಪ್ರಾರಂಭಿಸಿದ್ದು, ಈ ವೈಬ್ ಸೈಟ್ ಮೂಲಕ ಅಗತ್ಯ ಇರುವ ರಕ್ತ ಯಾವ ಬ್ಲಡ್ ಬ್ಯಾಂಕ್‍ನಲ್ಲಿ ಇದೆ ಎನ್ನುವ ಮಾಹಿತಿ ಸಿಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಬಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಗಾಂಧಿನಗರದ ಕುದ್ಮುಲ್ ರಂಗ ರಾವ್ ಸಮುದಾಯ ಭವನದಲ್ಲಿ ಉಳ್ಳಾಲ ನಗರ ಸಭೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಳ್ಳಾಲ ನಗರ ಪ್ರಾಥಮಿಕ ಆರೋಗ್ಯಕೇಂದ್ರ, ಪ್ರಾದೇಶಿಕ ರಕ್ತ ಪೂರಣಾ ಕೇಂದ್ರ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಎಂವಿ. ಶೆಟ್ಟಿ ಮೆಮೋರಿಯಲ್ ಟಸ್ಟ್ ಇವರ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಸ್ವಯಂ ಪ್ರೇರಿತ ರಕ್ತದಾನ ಬೃಹತ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ನಗರ ಸಭೆ ಅಧ್ಯಕ್ಷೆ ಗಿರಿಜಾ ಬಾೈ ಅದ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ಉಳ್ಳಾಲ ನಗರ ಸಭೆ ಉಪಾಧ್ಯಕ್ಷೆ ರಝೀಯಾ ಇಬ್ರಾಹಿಂ, ಸ್ಥಾಯಿ ಸಮಿತಿ ಅಧ್ಯಕ್ಷ ದಿನೇಶ್ ರೈ, ಕೌನ್ಸಿಲರ್‍ಗಳಾದ ಬಾಝಿಲ್ ಡಿ.ಸೋಜ, ಫಾರೂಕ್ ಉಳ್ಳಾಲ, ಮಹಮ್ಮದ್ ಮುಕ್ಕಚ್ಚೇರಿ, ಸುಂದರ ಉಳಿಯ, ಸುಕುಮಾರ್, ಜಿಲ್ಲಾ ಆರೋಗ್ಯ ಅ„ಕಾರಿ ಡಾ ರಾಜೇಶ್ವರೀ ದೇವಿ, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪುಷ್ಪಲತಾ, ಬಬ್ಬು ಸ್ವಾಮಿ ದೈವಸ್ಥಾನದ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಈಶ್ವರಾನಂದ ಭಜನಾ ಮಂದಿರದ ಅಧ್ಯಕ್ಷ ಹರಿಶ್ಚಂದ್ರ ಉಳ್ಳಾಲ್, ವೈದ್ಯರಾದ ಡಾ. ನವೀನ್, ಡಾ. ಶರತ್ ಉಪಸ್ಥಿತರಿದ್ದರು.