Site icon Ullalavani

ಕ್ರೀಡಾ ಭಾರತಿ ಉಳ್ಳಾಲ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಘೋಷಣೆ

ಉಳ್ಳಾಲ;ಕ್ರೀಡಾ ಭಾರತಿ ಮಂಗಳೂರು ಇದರ ಉಳ್ಳಾಲ ತಾಲೂಕು ಘಟಕ ಜ.23,2026 ರಂದು ರಚನೆಗೊಂಡಿದೆ.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ ಚೌಧರಿಯವರು ನೂತನ ಪದಾಧಿಕಾರಿಗಳನ್ನು ಸಂಘನಿಕೇತನದಲ್ಲಿ ನಡೆದ ಮಂಗಳೂರು ವಿಭಾಗ ಬೈಠಕ್‌ನಲ್ಲಿ ಘೋಷಿಸಿದರು.

ಕ್ರೀಡೆಯಿಂದ ಚಾರಿತ್ರ‍್ಯ ನಿರ್ಮಾಣ, ಚಾರಿತ್ರ‍್ಯದಿಂದ ರಾಷ್ಟ್ರ ನಿರ್ಮಾಣದ ಉದ್ದೆ?ಶವನ್ನು ಇಟ್ಟುಕೊಂಡು ರಾಷ್ಟ್ರ ಮಟ್ಟದಲ್ಲಿ ಕ್ರೀಡಾಭಾರತಿಯ ಸಂಘಟನೆಯು ೧೯೯೨ರಲ್ಲಿ ಆರಂಭವಾಗಿದ್ದು, ಮಂಗಳೂರು ಜಿಲ್ಲೆಯಲ್ಲಿ ೨೦೧೪ ರಂದು ಪ್ರಾರಂಭಿಸಲಾಗಿತ್ತು. ಆ ನಂತರ ಜಿಲ್ಲೆಯ ೬ ತಾಲೂಕುಗಳಲ್ಲಿ ಈಗಾಗಲೇ ಕ್ರೀಡಾಭಾರತಿ ಘಟಕಗಳನ್ನು ಆರಂಭಿಸಲಾಗಿದೆ. ಇದೀಗ ಉಳ್ಳಾಲದಲ್ಲಿ ಕ್ರೀಡಾ ಭಾರತಿ ಉಳ್ಳಾಲ ತಾಲೂಕು ಘಟಕ ರಚನೆಯಾಗಿದೆ.

ಅಧ್ಯಕ್ಷರಾಗಿ ನವೀನ್ ಆಳ್ವ ದೇವಿನಗರ, ಉಪಾಧ್ಯಕ್ಷರಾಗಿ ದಿನಕರ್ ಬಗಂಬಿಲ, ಮಾಧವ ಕಟ್ಟಜೆ ಹಾಗೂ ಸೂರಜ್ ದೇವಿನಗರ, ಕಾರ್ಯದರ್ಶಿಯಾಗಿ ನಿತಿನ್ ಉಳ್ಳಾಲ್,ಸಹ ಕಾರ್ಯದರ್ಶಿಯಾಗಿ ಪ್ರೀತಮ್ ಬಗಂಬಿಲ ಹಾಗೂ ಅಶ್ವಿತ್ ಪಕಳ, ಖಜಾಂಚಿಯಾಗಿ ರಾಜೇಶ್ ಕುಲಾಲ್, ಮಹಿಳಾ ಪ್ರಮುಖ್ ಡಾ.ಶಿಲ್ಪಾಶ್ರೀ, ಕ್ರೀಡಾ ಕೇಂದ್ರ ಪ್ರಮುಖ್ ಅವಿನಾಶ್ ಆಳ್ವ ಕೊಲ್ಯ ಇವರುಗಳನ್ನು ಘೋಷಿಸಲಾಯಿತು.

Exit mobile version