Site icon Ullalavani

ಮುಡಿಪುವಿನ ಬಹುಮುಖ ಪ್ರತಿಭೆ ಸ್ವಾತಿ ಸತೀಶ್ ಆತ್ಮಹತ್ಯೆಗೆ ಶರಣು..!

ಮುಡಿಪು: ಮುಡಿಪುವಿನ ಬಹುಮುಖ ಪ್ರತಿಭೆ, ಏಕಲವ್ಯನಂತೆ ಬದುಕು ಕಟ್ಟಿಕೊಂಡ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವರು ಚಿತ್ರಕಲಾವಿದ, ಕೋಬೋರ್ಡ್ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಡಿಪು ಗುಡ್ಡ ಪ್ರದೇಶದ ಪಾಂಡಿಕಟ್ಟ ಎಂಬಲ್ಲಿ ಹೆಂಡತಿ, ಮಗನೊಂದಿಗೆ ವಾಸವಾಗಿದ್ದರು.

ತಮ್ಮ ಸ್ವಂತ ಪರಿಶ್ರಮದಿಂದ ಚಿತ್ರಕಲೆ, ಕೀಬೋರ್ಡ್ ಕಲಿತು, ಅನೇಕರಿಗೆ ಕಲೆಯನ್ನು ಧಾರೆ ಎರೆಯುತ್ತಿದ್ದರು. ಯಾವುದೇ ದುಷ್ಚಟಗಳಿಲ್ಲದೇ ಆರಾಮದಾಯಕ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅದಲ್ಲದೇ ಅನೇಕರ ಕಲಾಜೀವನಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದ ಸತೀಶ್, ಮುಡಿಪು ಭಾರತಿ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದರು.

ಇದೀಗ ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ.

Exit mobile version