Site icon Ullalavani

ಜಾಗತಿಕ ಬಿಲ್ಲವ ಕ್ರೀಡಾ ಕೂಟ- ಚಾಂಪಿಯನ್ ಟ್ರೋಫಿ ಪಡೆದ ಬ್ರಹ್ಮಶ್ರೀ ಉಳ್ಳಾಲ ತಂಡ

ಉಳ್ಳಾಲ: ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಜಾಗತಿಕ ಬಿಲ್ಲವ ಕ್ರೀಡಾ ಕೂಟದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಬ್ರಹ್ಮಶ್ರೀ ಉಳ್ಳಾಲ ತಂಡ ಪಡೆದುಕೊಂಡಿದೆ. ಬ್ರಹ್ಮಶ್ರೀ ಉಳ್ಳಾಲ ತಂಡವು ವಾಲಿಬಾಲ್ ಪ್ರಥಮ, ಹಗ್ಗ ಜಗ್ಗಾಟ ದ್ವಿತೀಯ , ತ್ರೋಬಾಲ್‌ನಲ್ಲಿ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ.

ಮಾಜಿ ಸಚಿವ ವಿ ಸುನೀಲ್ ಕುಮಾರ್, ಶಾಸಕರಾದ ಡಿ ವೇದವ್ಯಾಸ್ ಕಾಮತ್, ಉಮಾನಾಥ ಕೋಟ್ಯಾನ್, ನಿಗಮದ ಅಧ್ಯಕ್ಷರಾದ ಹರೀಶ್ ಕುಮಾರ್, ಅಖಿಲಭಾರತ ಬಿಲ್ಲವರ ಯುನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಸಂಘಟನಾ ಕಾರ್ಯದರ್ಶಿ ಉದಯಚಂದ್ರ ಸುವರ್ಣ, ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದುಕುಮಾರ್ ಇವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ಅಧ್ಯಕ್ಷ ಕೆ ಟಿ ಸುವರ್ಣ ಚಾಂಪಿಯನ್ಸ್ ಟ್ರೋಫಿ ಸ್ವೀಕರಿಸಿದರು.

ಈ ಸಂದರ್ಭ ಕ್ರೀಡಾ ಕೂಟದ ಸಂಚಾಲಕ ಸದಾನಂದ ಪೂಜಾರಿ,ಸುಮಲತಾ ಸುವರ್ಣ, ಗಂಗಾಧರ ಪೂಜಾರಿ ಮುಂಬಯಿ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಗೌರವ ಸಲಹೆಗಾರ ಎ ಜೆ ಶೇಖರ್, ಕಾರ್ಯಧ್ಯಕ್ಷ ಸತೀಶ್ ಕರ್ಕೇರ, ಜೀವನ್ ಕುಮಾರ್ ತೊಕ್ಕೊಟ್ಟು, ತಂಡದ ತರಬೇತುದಾರ ಶಿಲ್ಪ, ಲಕ್ಷ್ಮಣ್ ಸೋಮೇಶ್ವರ, ಹರೀಶ್ ಅಂಬ್ಲ ಮೊಗರು, ಲಕ್ಷ್ಮಣ್ ಪೂಜಾರಿ , ರಾಜೇಶ್ ಕೆರೆಬೈಲು,ಆನಂದ ಅಸೈಗೋಳಿ,ಹರೀಶ್ ಮುಂಡೋಳಿ, ಶಿವಪ್ರಸಾದ್, ಗೋಪಿನಾಥ್ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Exit mobile version