Site icon Ullalavani

ಸಂಸ್ಕೃತಿಯ ಪರಿಚಯ ಮಾಡಿಕೊಡುವುದರಿಂದ ಸಂಸ್ಕಾರಯುತ ಸಮಾಜವನ್ನು ಸೃಷ್ಟಿಸಲು ಸಾಧ್ಯ : ಪದ್ಮ ಪ್ರಸಾದ್ ಜೈನ್

ಉಳ್ಳಾಲ: ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಕೊಡುವುದರಿಂದ ಸಂಸ್ಕಾರಯುತ ಸಮಾಜವನ್ನು ಸೃಷ್ಟಿಸಲು ಸಾಧ್ಯ ಎಂದು ಜೆ.ಸಿ ಇಂಟರ್ನ್ಯಾಷನಲ್ ಸ್ಕೂಲ್ ಕಾರ್ಕಳ ಇದರ ಉಪಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಅಭಿಪ್ರಾಯಪಟ್ಟರು.

ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲದ 13ನೇ ವರ್ಷದ ಗುರುಕುಲ ಉತ್ಸವದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಂತ್ರ ನಾಟ್ಯಕಲಾ ಗುರುಕುಲವು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ಬಾಲ್ಯದಲ್ಲೇ ಮಕ್ಕಳಿಗೆ ನಮ್ಮ ಭಾಷೆ, ಕಲೆ, ಸಾಹಿತ್ಯ, ಜನಪದ ಪರಂಪರೆ, ಧಾರ್ಮಿಕ ಸಹಿಷ್ಣುತೆ ಹಾಗೂ ಸಾಮಾಜಿಕ ಜವಾಬ್ದಾರಿಗಳ ಪರಿಚಯವಾಗುವುದರಿಂದ ಅವರ ಮನಸ್ಸಿನಲ್ಲಿ ಉತ್ತಮ ಗುಣಗಳು ಆಳವಾಗಿ ಬೇರೂರುತ್ತವೆ. ಸಂಸ್ಕೃತಿಯೊಂದಿಗೆ ಬೆಳೆದ ಮಗು ಸಮಾಜದೊಂದಿಗೆ ಹೊಂದಾಣಿಕೆಯಿಂದ ಬದುಕುವುದನ್ನು ಕಲಿಯುತ್ತದೆ. ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ, ದುರ್ಬಲರಿಗೆ ಸಹಾನುಭೂತಿ ಎಂಬ ಮೌಲ್ಯಗಳು ಸಹಜವಾಗಿ ಅವರಲ್ಲಿ ಬೆಳೆಯುತ್ತವೆ ಎಂದರು.

ಸಭಾಧ್ಯಕ್ಷತೆಯನ್ನು ರಾಜೇಶ್ ಅತ್ತಾವರ ವಹಿಸಿದ್ದರು, ಹರೀಶ್ ಮಾಸ್ಟರ್, ಆನಂದ ಕೆ ಅಸೈಗೋಳಿ, ನರೇಶ್ ಪಂಡಿತ್ ಹೌಸ್, ಗುರುಕುಲದ ಗೌರವಾಧ್ಯಕ್ಷೆ ಶಕೀಲಾ ಜನಾರ್ಧನ, ಟ್ರಸ್ಟಿಗಳು ಶೈನಾ ಶ್ರಾವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ನಡೆದ ಈ ಕಾರ್ಯಕ್ರಮದಲ್ಲಿ ಏಕಾದಶ ತಂಡಗಳ ನೃತ್ಯ ಕಾರ್ಯಕ್ರಮ ನೆರವೇರಿತು. ಗುರುಕುಲದ ಅಧ್ಯಕ್ಷರು ಶ್ರಾವಣ್ ಉಳ್ಳಾಲ್ ಸ್ವಾಗತಿಸಿದರು, ಕಿರಣ್ ಉಳ್ಳಾಲ್ ವಂದಿಸಿದರು.

Exit mobile version