Site icon Ullalavani

ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದ ಸಮಾಜ ಸೇವಕ

ಉಡುಪಿ, ಜ. 23 : ಎಕ್ಸ್ ಪ್ರೆಸ್ ಬಸ್ ನಿಂದ ಹೊರಕ್ಕೆ ಎಸೆಯಲ್ಪಟ್ಟ ಮಹಿಳೆಯೋರ್ವರು ಗಂಭೀರ ಗಾಯಗಳೊಂದಿಗೆ ಹೆದ್ದಾರಿ ಬದಿ ಬಿದ್ದಿರುವುದನ್ನು ಕಂಡ ಯುವ ಸಮಾಜ ಸೇವಕ ಕಟಪಾಡಿ ಅಭಿರಾಜ್ ಸುವರ್ಣ ಅವರು ತನ್ನ ಕಾರ್ ನಲ್ಲಿ ಚಿಕಿತ್ಸೆಗೆ ತುರ್ತಾಗಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆಯನ್ನು ಮೆರೆದ ಘಟನೆ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ.

ಅಂಡರ್ ಪಾಸ್ ಕಾಮಗಾರಿ ನಿರತ ಕಟಪಾಡಿಯ ಬಸ್ ತಂಗುದಾಣದಲ್ಲಿ ಕಟಪಾಡಿ ಮೂಡಬೆಟ್ಟು ಕುದ್ರಾಡಿ ಎಂಬಲ್ಲಿನ ಚಿಕ್ಕ ಪೂಜಾರ್ತಿ (50) ಎಂಬವರು ಉಡುಪಿಯತ್ತ ತೆರಳಲು ಎಕ್ಸ್ ಪ್ರೆಸ್ ಬಸ್ ಹತ್ತಿದ್ದರು. ಬಸ್ ಚಲಿಸುತ್ತಿದ್ದಂತೆಯೇ ಕೆಲವೇ ಕ್ಷಣಗಳಲ್ಲಿ ಇರುವ ತಿರುವಿನಲ್ಲಿ ಈಕೆ ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದರು.ಇದೇ ಹಾದಿಯಾಗಿ ತೆರಳುತ್ತಿದ್ದ ಅಭಿರಾಜ್ ಸುವರ್ಣ ಈಕೆಯನ್ನು ಚಿಕಿತ್ಸೆಗೆ ಕರೆದೊಯ್ಯಲು ಯಾವುದೇ ವಾಹನಗಳ ಲಭ್ಯವಿಲ್ಲದುದನ್ನು ಗಮನಿಸಿ, ಮತ್ತು ತುರ್ತು ಚಿಕಿತ್ಸೆಯ ಅಗತ್ಯತೆಯನ್ನು ಮನಗಂಡು ತನ್ನ ಕಾರ್ ಮೂಲಕ ಉಡುಪಿಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಾರೆ. ಐಸಿಯು ವಿನಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.


Exit mobile version