Site icon Ullalavani

ಸ್ಟೂಡೆಂಟ್ ಕೌನ್ಸಿಲ್-2015-16 ನೇ ಪದಗ್ರಹಣ ಸಮಾರಂಭ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಅಡಗಿರುವ ಪ್ರತಿಭೆಗಳನ್ನು ಬೆಳಕಿಗೆ ತರಲು ನೂತನ ಕೌನ್ಸಿಲ್ ಕಮಿಟಿ ಸದಸ್ಯರು ವಿವಿಧ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರಯತ್ನಿಸುವ ಮೂಲಕ ಹಿಂದಿನ ಕಮಿಟಿಯವರಿಗೆ ಮಾದರಿಯಾಗಬೇಕು ಎಂದು ರಾಜ್ಯ ಗುಪ್ತಚರ ಇಲಾಖೆಯ ಡಿಎಸ್ ಪಿ ಜಯಂತ್.ವಿ.ಶೆಟ್ಟಿ ಹೇಳಿದರು.

ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಸ್ಟೂಡೆಂಟ್ ಕೌನ್ಸಿಲ್-2015-16 ನೇ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕೌನ್ಸಿಲ್ ಕಮಿಟಿಯವರ ನಡೆಸಿದಂತಹ ಕಾರ್ಯಚಟುವಟಿಕೆಗಳು ಶ್ಲಾಘನೀಯ. ಅದರಂತೆ ಮುಂದೆಯೂ ಕಮಿಟಿ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಮುಂದುವರಿಸುತ್ತಾ, ಪ್ರತಿಭೆಗಳಿಗೆ ಸುಪ್ತ ಅವಕಾಶವನ್ನು ಒದಗಿಸಿಕೊಡಬೇಕಿದೆ. ವಿದ್ಯಾರ್ಥಿಗಳು ಪರಿಸರ ಪೂರಕವಾಗಿ ಬಾಳುವುದನ್ನು ಅರಿತು ವಾಹನಗಳನ್ನು ಮಿತಿಯಾಗಿ ಬಳಸಬೇಕಿದೆ. ಈ ಮೂಲಕ ಮಂಗಳೂರಿನಂತಹ ಶಿಕ್ಷಣ ಸಂಸ್ಥೆಗಳಿರುವ ನಗರದಲ್ಲಿ ಮಾಲಿನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ದೊಡ್ಡ ಕೊಡುಗೆಯನ್ನು ಕೊಟ್ಟಂತಾಗುತ್ತದೆ. ಅಲ್ಲದೆ ರಸ್ತೆ ಅಪಘಾತಗಳನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು ಎಂದರು.

ಈ ಸಂದರ್ಭ ಪ್ರಾಂಶುಪಾಲ ಹಾಗೂ ಡೀನ್ ಡಾ.ಯು.ಯಸ್.ಕೃಷ್ಣನಾಯಕ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿಯ ಡೀನ್ ಡಾ.ಪ್ರಿಯದರ್ಶಿನಿ ಹೆಗ್ಡೆ, ಡಾ.ಶಿಶೀರ್ ಶೆಟ್ಟಿ, ಉಪಸ್ಥಿತರಿದ್ದರು.

ಉಪಪ್ರಾಂಶುಪಾಲೆ ಡಾ.ಮಿತ್ರಾ.ಯನ್ ಹೆಗ್ಡೆ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಧಿ ಹರಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ರಾಹುಲ್ ಭಂಡಾರಿ ವಂದಿಸಿದರು.

Exit mobile version