Site icon Ullalavani

ಉಳ್ಳಾಲ: ಆದರ್ಶ ಮಿತ್ರ ಮಂಡಳಿಯ ಸುವರ್ಣ ಸಂಭ್ರಮ


ಉಳ್ಳಾಲ: ಆದರ್ಶ ಮಿತ್ರ ಮಂಡಳಿ ಕೊಲ್ಯ ಇದರ 50 ನೇ ಸುವರ್ಣ ಸಂಭ್ರಮ ಕಾರ್ಯಕ್ರಮವು ಜ.23 ರಿಂದ ಜ 25 ರ ವರೆಗೆ ಕೊಲ್ಯ ಶ್ರೀ ಶಾರದಾ ಮಂದಿರದಲ್ಲಿ ನಡೆಯಲಿದೆ ಎಂದು ಆದರ್ಶ ಮಿತ್ರ ಮಂಡಳಿಯ ಗೌರವ ಸಲಹೆಗಾರರಾದ ರಾಜೇಶ್ ಕುಮಾರ್ ಕೆ.ಎಸ್ ಹೇಳಿದರು.



ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿ, ಜ.23 ರಂದು ಶುಕ್ರವಾರ ಸಂಜೆ 4.30 ಗಂಟೆಗೆ ಶ್ರೀ ಶಾರದಾ ಮಹಿಳಾ ಮಂಡಳಿಯವರಿಂದ ಲಲಿತ ಸಹಸ್ರನಾಮ,5.30ಕ್ಕೆ ದೀಪ ಪ್ರಜ್ವಲನೆ, ಭಜನಾ ಕಾರ್ಯಕ್ರಮ, ಸಂಜೆ ಆರು ಗಂಟೆಗೆ ಸತ್ಯ ನಾರಾಯಣ ಪೂಜೆ, ರಾತ್ರಿ ಎಂಟು ಗಂಟೆಗೆ ಮಹಾ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದರು.


ಜ.24 ರಂದು ಶನಿವಾರ ರಾತ್ರಿ ಸಭಾ ಕಾರ್ಯಕ್ರಮ ನಡೆಯಲಿದ್ದು ಉದ್ಯಮಿ ಸೌಂದರ್ಯ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮ ದಲ್ಲಿ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಟಿ ಜಿ ರಾಜರಾಮ ಭಟ್ ಅವರಿಗೆ ಸನ್ಮಾನ ಹಾಗೂ ಕರ್ನಾಟಕ ಜನಪದ ಪರಿಷತ್ ಉಳ್ಳಾಲ ಘಟಕ ಅಧ್ಯಕ್ಷ ಪ್ರವೀಣ್ ಎಸ್ ಕುಂಪಲ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಪೊಯ್ಯತ ಬೈಲ್, ಕರಾಟೆ ಪಟು ರಾಜೇಶ್ ಕುಮಾರ್ ಕೊಲ್ಯ ಅವರನ್ನು ಅಭಿನಂದಿಸಲಾಗುವುದು ಎಂದರು.
ಜ 25 ಭಾನುವಾರ ಸಂಜೆ 6.30ಕ್ಕೆ ರಸಮಂಜರಿ, ರಾತ್ರಿ 8.30ಕ್ಕೆ ಲಯನ್ ಕಿಶೋರ್ ಡಿ ಶೆಟ್ಟಿ ಅವರ ನಿರ್ದೇಶನದ ‘ಆಂಟೀ ಬೊಕ್ಕ ಅಂಕಲ್ ‘ ತುಳು ನಾಟಕ ನಡೆಯಲಿದೆ ಎಂದರು.


ಸುದ್ದಿ ಗೋಷ್ಠಿಯಲ್ಲಿ ಕೊಲ್ಯ ಆದರ್ಶ ಮಿತ್ರ ಮಂಡಳಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮನೋಜ್ ಕಟ್ಟೆಮನೆ,ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಚ್.ಕೊಲ್ಯ, ಆದರ್ಶ ಮಿತ್ರ ಮಂಡಳಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಕುಜುಮಗದ್ದೆ,ಕೋಶಾಧಿಕಾರಿ ಪ್ರಶಾಂತ್ ಕೊಲ್ಯ ಕುಜುಮಗದ್ದೆ,ಗೌರವ ಸಲಹೆಗಾರ ಲಿಂಗಪ್ಪ ಪೂಜಾರಿ,ಸಾಂಸ್ಕೃತಿಕ ಸಂಚಾಲಕ ಹೃತ್ವಿಕ್ ಕೊಲ್ಯ,ಕ್ರೀಡಾ ಕಾರ್ಯದರ್ಶಿ ರೋಶನ್ ಕೊಲ್ಯ,ಸದಸ್ಯರಾದ ಪ್ರಮೋದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version