Site icon Ullalavani

ಕೋಟೆಪುರದಲ್ಲಿ ಮೀನುಗಾರರಿಗೆ ಪ್ರಥಮ ಚಿಕಿತ್ಸಾ ಶಿಬಿರ

ಉಳ್ಳಾಲ: ಯಾರಾದರೂ ನೀರಿಗೆ ಬಿದ್ದಾಗಲೂ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು, ಹೃದಯಾಘಾತ ಸಂಭವಿಸಿದ ತಕ್ಷಣ ಸಿಪಿಆರ್ ನೀಡಬೇಕು. ಸಮಯ ವ್ಯಯಿಸಿದರೆ ವ್ಯಕ್ತಿಯ ಅಂಗಾಂಗ ಕ್ಷೀಣವಾಗಿ ಸಾವು ಸಂಭವಿಸುವ ಅಪಾಯ ಇದೆ ಎಂದು ಕೆಎಂಸಿ ಆಸ್ಪತ್ರೆಯ ಸ್ಟಾಫ್ ನರ್ಸ್ ಪೂರ್ಣಿಮಾ ಹೇಳಿದರು.

ಉಳ್ಳಾಲ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ವತಿಯಿಂದ ಮೀನುಗಾರರ ಸುರಕ್ಷತೆ ನಿಟ್ಟಿನಲ್ಲಿ ಮಂಗಳವಾರ ಕೋಟೆಪುರದಲ್ಲಿ ನಡೆದ ಪ್ರಥಮ ಚಿಕಿತ್ಸಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಮೀನುಗಾರಿಕೆಗೆ ತೆರಳಿದ ಸಂದರ್ಭ ಹೃದಯಾಘಾತ ಆದರೆ ಪಥಮ ಚಿಕಿತ್ಸೆ ನೀಡಿದ ಬಳಿಕ ತಕ್ಷಣ ಆಸ್ಪತ್ರೆಗೆ ಸೇರಿಸುವ ಮೂಲಕ ಜೀವ ಉಳಿಸಲು ಸಾಧ್ಯವಿದ್ದು ಈ ವಿಚಾರದಲ್ಲಿ ಮೀನುಗಾರರು ಸದಾ ಜಾಗರೂಕರಾಗಿರಬೇಕು ಎಂದು ಕಿವಿಮಾತು ಹೇಳಿದರು.
ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಅಧ್ಯಕ್ಷತೆ ವಹಿಸಿದ್ದರು. ಶಿಪ್ಪಿಂಗ್ ಸಂಸ್ಥೆಯ ಅಧಿಕಾರಿ ಪ್ರೀತಮ್, ಪೈಲೆಟ್ ಯು.ಕೆ.ಇಸ್ಮಾಯಿಲ್, ಸಂಘದ ಕಾರ್ಯದರ್ಶಿ ಅಬ್ದುಲ್ ಘನಿ, ಸಲಹೆಗಾರರಾದ ಇಸ್ಮಾಯಿಲ್ ಕೋಡಿ, ಯುಕೆಎಫ್ ಮೋನು ಮೊದಲಾದವರು ಉಪಸ್ಥಿತರಿದ್ದರು.
ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ
ಸಂಘದ ವ್ಯವಸ್ಥಾಪಕ ಸಿದ್ದೀಕ್ ವೈಟ್ ಕಾರ್ಯಕ್ರಮ ನಿರೂಪಿಸಿದರು.

Exit mobile version