Site icon Ullalavani

ಉಳ್ಳಾಲ: ಜ.18 ರಿಂದ ” ಹಿಂದೂ ಸಂಗಮ‌” ಕಾರ್ಯಕ್ರಮ

ಕೊಣಾಜೆ: ಹಿಂದು ಸಂಗಮ ಆಯೋಜನಾ ಸಮಿತಿ, ಉಳ್ಳಾಲ ತಾಲೂಕು ಇದರ ವತಿಯಿಂದ ತಾಲೂಕಿನ ಹತ್ತು ಮಂಡಲಗಳಲ್ಲಿ “ಹಿಂದು ಸಂಗಮ” ಕಾರ್ಯಕ್ರಮವು ಜ.18 ರಿಂದ ಫೆ.1 ವರೆಗೆ ನಡೆಯಲಿದೆ.


ಜ.18 ರಂದು ಮದ್ಯಾಹ್ನ 3 ಗಂಟೆಗೆ ಪಾವೂರು ಮಂಡಲದ ಗೋವನಿತಾಶ್ರಮ ಬೀಜಗುರಿ,‌ ಜ.25 ರಂದು ಮಧ್ಯಾಹ್ನ 3 ಗಂಟೆಗೆ ಕೈರಂಗಳ ಹೂ ಹಾಕುವ ಕಲ್ಲು ಮೈದಾನದಲ್ಲಿ ಪೆರ್ಮನ್ನೂರು ಮಂಡಲ ಕುತ್ತಾರು ರಾಜರಾಜೇಶ್ವರಿ ದೇವಸ್ಥಾನ ದಲ್ಲಿ ನಡೆಯಲಿದೆ.
ಫೆ.1ರಂದು ಮದ್ಯಾಹ್ನ 3 ಕ್ಕೆ.ತಲಪಾಡಿ ಮಂಡಲದ ದೇವಿಪುರ ದೇವಸ್ಥಾನ., ಉಳ್ಳಾಲ ಮಂಡಲದ ಐಸ್ ಫ್ಯಾಕ್ಟರಿ. ಛೋಟಾ ಮಂಗಳೂರು. ಬಳಿ , ಕೋಟೆಕಾರು ಮಂಡಲದ ಮಾಡೂರು. ನೀರಿನ ಟ್ಯಾಂಕ್ ಬಳಿ, ಕುರ್ನಾಡ್ ಮಂಡಲದ ಮುಡಿಪು ಕಾಯರ್ ಗೋಳಿ ಮೈದಾನ, ಕೊಣಾಜೆ ಮಂಡಲದ ಅಸೈಗೋಳಿ ಮೈದಾನದಲ್ಲಿ, ಅಂಬ್ಲಮೊಗರು ಮಂಡಲದ ಅಡು ಬಾಕಿಮಾರ್ ಗದ್ದೆಯಲ್ಲಿ, ಸೋಮೇಶ್ವರ ಮಂಡಲದ ಕೊಲ್ಯದಲ್ಲಿ ನಡೆಯಲಿದೆ.
ಸಾಮಾಜಿಕ ಸೇವಾ, ಸಹಕಾರ, ಸ್ವಾವಲಂಬನೆ ವೃದ್ಧಿಸುವ ಸಲುವಾಗಿ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ, ಸಹಕಾರಿ ಇತ್ಯಾದಿ ಎಲ್ಲಾ ಪ್ರಕಾರದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರೀಕ ಕರ್ತವ್ಯಗಳ ಪಾಲನೆಯ ಅನುಷ್ಠಾನದಂತಹ ಆದರ್ಶಗಳ ಅಡಿಯಲ್ಲಿ ಸುಮಾಜಕ್ಕಾಗಿ ಸಂಘಟಿತವಾಗಿ ಸ್ಥಳೀಯ ಸಮಾಜವೇ ನಡೆಸುವ ಕಾರ್ಯಕ್ರಮಗಳು ಆಗಲಿವೆ.
ಸರ್ವರೂ ಭಾಗವಹಿಸಿ ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗೊಳಿಸಬೇಕೆಂದು ಆಯೋಜನಾ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

Exit mobile version