ಶಿಮಂತೂರು: ತಾಯಿಯ ಋಣವನ್ನು ಎಷ್ಟೇ ಜನ್ಮವೆತ್ತಿ ಬಂದರೂ ತೀರಿಸೋಕೆ ಆಗಲ್ಲ ಎಂಬ ಮಾತಿದೆ. ಆದ್ರೆ ಈ ಮಕ್ಕಳು ತಾಯಿಯ ಕನಸು, ನಂಬಿಕೆ ಮತ್ತು ಭಕ್ತಿಭಾವವನ್ನು ಜೀವಂತವಾಗಿ ಉಳಿಸುವ ಉದ್ದೇಶದಿಂದ ಶಿಮಂತೂರು ಬಲೆಪು ಮನೆಯಲ್ಲಿ ಭಕ್ತಿಭಾವಪೂರ್ಣ ಯಕ್ಷಗಾನ ಸೇವೆ ಇದೇ ಜನವರಿ 16 ರ ಪುಣ್ಯ ಶುಕ್ರವಾರದ ಸಂಜೆ 6ಗಂಟೆಗೆ ನಡೆಯಲಿದೆ. ಹೌದು, ದಿವಂಗತ ಶಕುಂತಲಾ ಅವರ ಸ್ಮರಣಾರ್ಥವಾಗಿ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ಪ್ರಸಿದ್ಧ ದಶಾವತಾರ ಯಕ್ಷಗಾನ ಮಂಡಳಿಯಿAದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಈ ಭಕ್ತಿ ಸೇವೆಯನ್ನು ಕಿರಿಯ ಪುತ್ರ ಡಾ. ಚಂದ್ರಶೇಖರ್ ಅವರು ತಾಯಿಯ ಅಪೇಕ್ಷೆಯಂತೆ ಶ್ರದ್ಧಾಭಕ್ತಿಯಿಂದ ಆಯೋಜಿಸಿದ್ದು, ತಂದೆ ಬಾಬು ಪೂಜಾರಿ ಬಲೆಪು ಮನೆ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮಕ್ಕೆ ವಿಶೇಷ ಅರ್ಥಪೂರ್ಣತೆ ದೊರೆತಿದೆ.
ಬಲೆಪು ಮನೆ, ಶಿಮಂತೂರು ಇವರ ಮನೆಯ ಮುಂಭಾಗದಲ್ಲಿ ವಿದ್ಯುದ್ದೀಪಾಲಂಕೃತಗೊAಡ ಭವ್ಯ ರಂಗಮAಟಪದಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಸೇವೆಯ ಬಯಲಾಟವಾಗಿ ಯಕ್ಷಗಾನ ಕಲಾವಿದರು ಆಡಿತೋರಿಸಲಿದ್ದಾರೆ. ಸಂಜೆ 6.00 ಗಂಟೆಗೆ ಚೌಕಿಪೂಜೆ, ರಾತ್ರಿ 8.00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಯಕ್ಷಭಿಮಾನಿಗಳು ಆಗಮಿಸುವಂತೆ ಸೇವಾಕರ್ತರು ವಿನಂತಿಸಿದ್ದಾರೆ.
ವಿಳಾಸ: ಬಲೆಪು ಮನೆ, ಶಿಮಂತೂರು
ಸoಪರ್ಕ: 9967731156
