Site icon Ullalavani

ಮನೆಗೆ ಹೋಗಲು ರಸ್ತೆ ಮಾಡಿಕೊಡಿ; ಬಂಟ್ವಾಳ ತಹಶಿಲ್ದಾರ್ ಕಚೇರಿಯ ಮೆಟ್ಟಿಲ ಮೇಲೆ ಧರಣಿ ಕುಳಿತ ಕುಟುಂಬ

ಬಂಟ್ವಾಳ, ಜ. 10 : ಮನೆಗೆ ಹೋಗಲು ರಸ್ತೆ ಮಾಡಿಕೊಡಿ ಎಂದು ಕುಟುಂಬವೊಂದು ಬಂಟ್ವಾಳ ತಹಶಿಲ್ದಾರ್ ಕಚೇರಿಯ ಮೆಟ್ಟಿಲ ಮೇಲೆ ಧರಣಿ ಕುಳಿತಕೊಂಡ ಘಟನೆ ನಡೆದಿದ್ದು, ಇವರ ಹೋರಾಟಕ್ಕೆ ಅಂಬೇಡ್ಕರ್ ತತ್ವ ಹಿತರಕ್ಷಣಾ ವೇದಿಕೆ ಕೈ ಜೋಡಿಸಿದೆ.

ಪುಣಚ ಗ್ರಾಮದ ಸುಣ್ಣಂಗಳ ರಾಮಣ್ಣ ನಾಯ್ಕ ಹಾಗೂ ಅವರ ಪತ್ನಿ ಸುನಂದಾ ಮತ್ತು ಮಕ್ಕಳು ರಸ್ತೆಗಾಗಿ ತಹಶಿಲ್ದಾರ್ ಕಚೇರಿಯ ಮುಂಭಾಗದಲ್ಲಿ ಧರಣಿ ಕುಳಿತಕೊಂಡಿದ್ದಾರೆ. ಕಳೆದ 75 ವರ್ಷಗಳಿಂದ ಕಾಲುದಾರಿ ಮಾತ್ರ ಇದ್ದು ರಸ್ತೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದು, ಹೊರತು ಲಾಭವಾಗಿಲ್ಲ ಎಂದು ಪ್ರತಿಭಟನೆ ನಿರತ ಕುಟುಂಬ ಹೇಳಿದೆ. ಇನ್ನು ತಿಂಗಳ ಹಿಂದೆ ರಾಮಣ್ಣ ಅವರ ಪತ್ನಿ ಸುನಂದಾ ಅವರಿಗೆ ಆರೋಗ್ಯ ಸಮಸ್ಯೆಯಾದಾಗ ರಸ್ತೆಯಿಲ್ಲದ ಕಾರಣ ಆಸ್ಪತ್ರೆಗೆ ಹೋಗಲು ಸಾಕಷ್ಟು ಕಷ್ಟ ಪಡಬೇಕಾಯಿತು. ಇಂತಹ ಸಂದರ್ಭಗಳಲ್ಲಿ ರಸ್ತೆ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಈ ಬಗ್ಗೆ SC ST ಸಭೆಯಲ್ಲಿ ಕೂಡ ಅಧಿಕಾರಿಗಳ ಗಮನಕೆ ತಂದಿದ್ದೇವೆ. ಇನ್ನು ತಾಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ನೇತ್ರತ್ವದಲ್ಲಿ ಇಂದು ಧರಣಿ ಕುಳಿತ ಕುಟುಂಬಕ್ಕೆ ಸಾಥ್ ನೀಡಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಅಧಿಕಾರಿ, ರಾಮಣ್ಣ ಕುಟುಂಬಕ್ಕೆ ರಸ್ತೆ ನಿರ್ಮಾಣದ ಬಗ್ಗೆ ಕಂದಾಯ ಇಲಾಖೆಗೆ ಲಿಖಿತವಾದ ಅರ್ಜಿಗಳಿವೆ. ಹಾಗಾಗಿ ತಹಶಿಲ್ದಾರ್ ಅವರ ನೇತ್ರತ್ವದಲ್ಲಿ ಜಾಗದ ಸರ್ವೇ ಕಾರ್ಯ ಮಾಡಲಾಗಿದೆ. ಸ್ವಂತ ಖಾಸಗಿ ಜಾಗದಲ್ಲಿ ರಸ್ತೆಯ ಸಮಸ್ಯೆಗಳಿದ್ದು, ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಿಸಿಕೊಡುವ ಬಗ್ಗೆ ಕುಟುಂಬಕ್ಕೆ ಭರವಸೆ ನೀಡಲಾಗಿದೆ. ತಹಶಿಲ್ದಾರ್ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿರುವುದರಿಂದ ಅವರ ನಿರ್ದೇಶನ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Exit mobile version