Site icon Ullalavani

ಚಾರ್ಮಾಡಿ ಘಾಟ್‌ನಲ್ಲಿ ಕಾಡಾನೆ ಪ್ರತ್ಯಕ್ಷ; ವಾಹನ ಸಂಚಾರ ಅಸ್ತವ್ಯಸ್ತ..!

ಬೆಳ್ತಂಗಡಿ, ಜ. 10 : ಚಾರ್ಮಾಡಿ ಘಾಟ್ ರಸ್ತೆಯ ಎರಡು ಮತ್ತು ಮೂರನೇ ತಿರುವಿನ ಮಧ್ಯೆ ಶುಕ್ರವಾರ ರಾತ್ರಿ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ರಾತ್ರಿ ಸುಮಾರು 9.45ರ ಸುಮಾರಿಗೆ ಮರವೊಂದನ್ನು ಮುರಿದು ರಸ್ತೆಯ ಮಧ್ಯದಲ್ಲೇ ನಿಂತ ಆನೆಯು ಅದರ ಎಲೆಗಳನ್ನು ತಿನ್ನುತ್ತಾ ನಿಂತಿತ್ತು. ಈ ಸಂದರ್ಭದಲ್ಲಿ ವಾಹನ ಸವಾರರು ಆನೆಯನ್ನು ಕಾಡಿನೊಳಗೆ ಅಟ್ಟಲು ಪ್ರಯತ್ನಿಸಿದರು. ಆದರೆ ಆನೆಯು ಸ್ಥಳದಿಂದ ಕದಲದ ಕಾರಣ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲುವಂತಾಯಿತು.ಈ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಇಲ್ಲದ ಕಾರಣ, ಆನೆಯ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಪ್ರಯಾಣಿಕರು ಹರಸಾಹಸ ಪಡಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Exit mobile version