Site icon Ullalavani

4 ದನಗಳನ್ನು ಕದ್ದ ಝುಲ್ಫಾನ್ ಮಾಲಿಕ್ ಪೊಲೀಸ್ ಕಸ್ಟಡಿಗೆ..!

ಉಳ್ಳಾಲ: ಮೇಯಲು ಹೋಗಿದ್ದ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಎಂಬುವವರ ಒಟ್ಟು 04ದನಗಳು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬoಧಿಸಿದoತೆ ಇದೀಗ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯುತ್ತಿದ್ದಾಗ 4 ದನಗಳನ್ನು ಉಳ್ಳಾಲ ತಾಲೂಕಿನ ಝುಲ್ಫಾನ್ ಮಾಲಿಕ್ ಕಳ್ಳತನ ಮಾಡಿದ್ದಾನೆ.

ದನಗಳು ಮರಳಿ ಮನೆಗೆ ಬಾರದ ಹಿನ್ನಲೆ ದನದ ಮಾಲೀಕರು ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.

Exit mobile version