Site icon Ullalavani

ಜ.11ರಿಂದ ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಳದ ವರ್ಷಾವಧಿ ಉತ್ಸವ,ರಥೋತ್ಸವ

ಉಳ್ಳಾಲ;ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಹಾಗೂ ರಥೋತ್ಸವ ಇದೇ ಜ.11ರಿಂದ 18ರವರೆಗೆ ನಡೆಯಲಿದೆ ಎಂದು ನೂತನ ರಥ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾದ ತಿರುಮಲೇಶ್ವರ ಭಟ್ ಪೆರಡೆ ಹೇಳಿದ್ದಾರೆ.

ಇವರು ಉಳ್ಳಾಲದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜ.15ರಂದು ನೂತನ ಮಹಾರಥ, ಪುಷ್ಪರಥ ಹಾಗೂ ಪಲ್ಲಕ್ಕಿ ಸಮರ್ಪಣೆ ನಡೆಯಲಿದ್ದು, ಜಾತ್ರೋತ್ಸವದ ಪ್ರಯುಕ್ತ ಜ.11ರಂದು ಕುತ್ತಾರು ರಾಜರಾಜೇಶ್ವರಿ ಸಾನಿಧ್ಯದಿಂದ ಮಧ್ಯಾಹ್ನ 2:30ಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಜನವರಿ 12ರಂದು ಬೆಳಗ್ಗೆ 8ರಿಂದ ಸಾಮೂಹಿಕ ರುದ್ರಯಾಗ, ಜನವರಿ 14ರಂದು ಧ್ವಜಾರೋಹಣ, ಜ.15ರಂದು ಬಲಿವಾಡು ಸೇವೆ, ಸಂಜೆ 6:30ಕ್ಕೆ ದೊಡ್ಡರಂಗ ಪೂಜೆ, ರಾತ್ರಿ 7ಕ್ಕೆ ಮಹಾರಥ, ಪುಷ್ಪರಥ, ಪಲ್ಲಕ್ಕಿ ಸಮರ್ಪಣೆ, ಸಂಜೆ 7:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ 8:30ಕ್ಕೆ ಬಲಿ ಉತ್ಸವ ಪುಷ್ಪ ರಥೋತ್ಸವ ನೆರವೇರಲಿದೆ ಎಂದರು.

ಜ.15ರಂದು ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ರಾಜಕೀಯ, ಧಾರ್ಮಿಕ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಜ.16ರಂದು ಸಂಜೆ 7ಕ್ಕೆ ಪಲ್ಲಕ್ಕಿ ಉತ್ಸವ, ಪುಷ್ಪ ರಥೋತ್ಸವ, ಜ.17ರಂದು ಮಧ್ಯಾಹ್ನ 12ಕ್ಕೆ ಮಹಾರಥಾರೋಹಣ, ಸಂಜೆ 6:30ಕ್ಕೆ ಮಹಾರಥೋತ್ಸವ, ಜ.18ರಂದು ಬೆಳಗ್ಗೆ 8ರಿಂದ ಸಾಮೂಹಿಕ ವಿಷ್ಣುಯಾಗ, ಸಂಜೆ 6:30ರಿಂದ ಯಾತ್ರಾಹೋಮ ನಡೆಯಲಿದೆ. ಪ್ರತೀ ದಿನ ಮದ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ಬಳಿಕ ಅನ್ನದಾನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಮದು ಮಾಹಿತಿ ನೀಡಿದರು.

ಇನ್ನು ಈ ಸುದ್ದಿಗೋಷ್ಠಿಯಲ್ಲಿ ಅನುವಂಶಿಕ ಅರ್ಚಕರಾದ ಟಿ.ಸುಬ್ರಹ್ಮಣ್ಯ ಭಟ್, ಟಿ.ವೆಂಕಟೇಶ ಆಚಾರ್ಯ, ಪವಿತ್ರಾ ಪಾಣಿಬಲ್ಲಾಳಬೀಡು ಶ್ರೀನಿವಾಸ ಬಲ್ಲಾಳ, ನೂತನ ರಥ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಅಡಪ್ಪ ತೇವುನಾಡುಗುತ್ತು, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಆಳ್ವ ತೇವುನಾಡುಗುತ್ತು, ರಾಮದಾಸ್ ಆಳ್ವ ತೇವುನಾಡುಗುತ್ತು, ನಂದಿನಿ ರಘುಶೆಟ್ಟಿ ಗುರಿಕಾರಮೂಲೆ, ವಸಂತ ಕೋಡಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಸುಕೇಶ್ ಮಂಜನಾಡಿ ಉಪಸ್ಥಿತರಿದ್ದರು.

Exit mobile version