ಉಳ್ಳಾಲ: ಮಂಗಳೂರು ಪೊಲೀಸ್ ಕಮೀಷನರ್ ಹಾಗೂ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಾದ್ಯಂತ ಜೂಜು ಸಹಿತ ಕೋಳಿ ಅಂಕಕ್ಕೆ ತಡೆ ಹಾಕಿರುವ ಬೆನ್ನಲ್ಲೇ ಪೊಲೀಸ್ ಸರಹದ್ದಿನಲ್ಲಿ ಜೂಜು ರಹಿತ ಕೋಳಿ ಅಂಕ ಹರೇಕಳದ ಕುತ್ತಿಮುಗೇರು ಜಾತ್ರೆ ಸಂದರ್ಭ ಸಾಂಪ್ರದಾಯಿಕವಾಗಿ ಜರಗಿದ್ದು, ಈ ಕುರಿತ ಜವಾಬ್ದಾರಿಯನ್ನು ಬಿಜೆಪಿ ಮುಖಂಡ, ಅರೆ ಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸಿ ತನ್ನೂರಿನ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕರಾವಳಿಗರ ಕೋಳಿ ಅಂಕವನ್ನು ಸಾಂಪ್ರಾದಾಯಿಕ ಹಿನ್ನಲೆಯಲ್ಲಿ ನೋಡುತ್ತಾರೆ. ತುಳುನಾಡಿನಲ್ಲಿ ಆರಾಧಿಸಲಾಗುವ ಪ್ರತಿಯೊಂದು ದೈವಕ್ಕೆ ಸಂಬAಧಪಟ್ಟ ದೈವಸ್ಥಾನದಲ್ಲೂ ಕೋಳಿ ಅಂಕ ಮಾಡೋದು ಕಡ್ಡಾಯ ಎನ್ನುವ ಅಲಿಖಿತ ನಂಬಿಕೆ ಇದೆ. ಆದರೆ ರಾಜ್ಯಸರಕಾದ ಕಾನೂನಿಂದ ಸಾಂಪ್ರಾದಾಯಕ್ಕೆ ಕುತ್ತು ಬಂದಿದೆ. ಇದರಿಂದ ಆಕ್ರೋಶ ವ್ಯಕ್ತವಾದ ಹಿನ್ನಲೆ ಕೇವಲ ಗಂಟೆಗಳ ಸಮಯದಲ್ಲಿ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಮಾತ್ರ ಅವಕಾಶವನ್ನು ನೀಡಲಾಗುತ್ತಿದೆ. ಅಂತೆಯೇ ನಿಗದಿತ ಸಮಯದಲ್ಲಿ ಕುತ್ತಿಮುಗೇರು ಜಾತ್ರೆಯ ಹಿನ್ನಲೆ ಕೋಳಿ ಅಂಕ ನಡೆಯಿತು. ಪೊಲೀಸ್ ಆಯುಕ್ತರು ನೀಡಿದ ಗಡುವಿನೊಳಗೆ ಕೋಳಿ ಅಂಕ ಮುಗಿಸುವುದರ ಹಿಂದೆ ಬೆಂಬಲವಾಗಿ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ನಿಂತಿದ್ದರು. ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಈ ಹಿಂದೆ ಕರಾವಳಿಗರ ಆಸ್ಮಿತೆಗೆ ಧಕ್ಕೆ ಬಂದಾಗ ಅವರ ಬೆಂಬಲಕ್ಕೆ ಸದಾ ಮುಂಚೂಣಿಯಲ್ಲಿದ್ದವರು.
ಅದಲ್ಲದೇ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರಾಗಿರುವ ಇವರು ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ರಿಯಾಯಿತಿ ಶುಲ್ಕದಲ್ಲಿ ಶಿಕ್ಷಣ ನೀಡುವುದು ಜೊತೆಗೆ ಅಶಕ್ತರಿಗೆ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಅದನ್ನು ಅವರ ಚೌಕಟ್ಟಿನೊಳಗೆ ಪರಿಹರಿಸುವ ಮೂಲಕ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಇದೀಗ ಇತಿಹಾಸ ಪ್ರಸಿದ್ಧ ಮಂಗಳೂರು ಉಳ್ಳಾಲ ಹರೇಕಳ ಕುತ್ತಿಮುಗೇರು ಜಾತ್ರೆ ಪ್ರಯುಕ್ತ ಅನಾದಿ ಕಾಲದಿಂದ ನಡೆದು ಬಂದ ಸಾಂಪ್ರದಾಯಿಕ ಕೋಳಿ ಅಂಕ ಯಾವುದೇ ಜೂಜು ಇಲ್ಲದೆ ನಿಗದಿತ ಸಮಯದೊಳಗೆ ಅಂಕ ನಡೆಯವ ನಿಟ್ಟಿನಲ್ಲಿ ಸ್ಥಳದಲ್ಲೇ ರವೀಂದ್ರ ಶೆಟಿ ಉಳಿದೊಟ್ಟು ಇದ್ದುಕೊಂಡು ಯಶಸ್ವಿಯಾಗಲು ಸಹಕರಿಸಿದ್ದಾರೆ.
