Site icon Ullalavani

ಈ ಮೀನು ಮಾರುಕಟ್ಟೆಯಲ್ಲಿ ಕಾಸರಗೋಡಿನಿಂದ ಉಳ್ಳಾಲದವರೆಗಿನ ಜನರು ಮುಗಿಬೀಳುತ್ತಾರೆ..?

ತಲಪಾಡಿ,ಜ.7: ಮೀನು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಅದರಲ್ಲೂ ಕರಾವಳಿಗರಿಗಂತೂ ದಿನನಿತ್ಯದ ಊಟದಲ್ಲಿ ಮೀನು ಇರಲೇ ಬೇಕು.

ಹೆಚ್ಚಾಗಿ ಫ್ರೆಶ್ ಮೀನನ್ನು ಜನರು ಮುಗಿಬಿದ್ದು ಖರೀದಿಸುತ್ತಾರೆ. ಅದರಲ್ಲೂ ತಲಪಾಡಿ ಮೀನು ಮಾರುಕಟ್ಟೆ ಎಲ್ಲ ಬಗೆಯ ವೆರೈಟಿ ಮೀನುಗಳ ಗೂಡು.

ಹೌದು, ತಲಪಾಡಿ ಮೀನು ಮಾರುಕಟ್ಟೆಗೆ ಕಾಸರಗೋಡಿನಿಂದ ಉಳ್ಳಾಲದವರೆಗಿನ ಜನರು ಹೋಗಿ ರುಚಿ-ಶುಚಿಯಾದ ಮೀನುಗಳನ್ನು ಖರೀದಿಸುತ್ತಾರೆ. ಸಂಜೆಯಾಗಿತ್ತಿದ್ದAತೆ ಮಾರುಕಟ್ಟೆಯಲ್ಲಿ ಜನಜಂಗುಳಿ ಜಾಸ್ತಿಯಾಗುತ್ತದೆ. ಇಲ್ಲಿ ಸಿಗುವಂತಹ ಫ್ರೆಶ್ ವೆರೈಟಿ ಮೀನುಗಳು ಇತರ ಕಡೆ ಸಿಗುವುದಿಲ್ಲ. ಇದು ಮಾರುಕಟ್ಟೆಯ ಅಭಿವೃದ್ಧಿಗೆ ಕಾರಣವಾಗಿದೆ ಎಂದರೆ ತಪ್ಪಗಲಾರದು.

ಮಾರುಕಟ್ಟೆಗೆ ಬರುವ ಗ್ರಾಹಕರು ನಿರಾಶರಾಗಿ ವಾಪಾಸ್ ಹೋಗುವುದಿಲ್ಲ ಎಂಬುವುದೇ ಇಲ್ಲಿನ ಮಾರುಕಟ್ಟೆಯ ವಿಶೇಷವಾಗಿದೆ. ಬೂತಾಯಿ, ಬಂಗುಡೆ, ಅಂಜಲ್, ಸಿಗಡಿ, ಏಡಿ, ಸೇರಿದಂತೆ ಸಣ್ಣ ಮೀನಿನಿಂದ ಹಿಡಿದು ದೊಡ್ಡ ಮೀನಿನವರೆಗಿನ ಎಲ್ಲ ವೈವಿಧ್ಯಮಯ ಮೀನುಗಳು ಲಭ್ಯ.

Exit mobile version