Site icon Ullalavani

ಜ.10-ಓಶಿಯನ್ ಪರ್ಲ್ ಸಭಾಂಗಣದಲ್ಲಿ`ಸ್ವರಾನುಬoಧ ಸಂಗೀತ ಉತ್ಸವ’

ಮಂಗಳೂರು: ನಗರದ ನವ ಭಾರತ್ ಸರ್ಕಲ್ ಬಳಿಯಿರುವ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಜನವರಿ 10 ರಂದು ಶನಿವಾರ ದಂದು ಮಧ್ಯಾಹ್ನ 3.00 ರಿಂದ ರಾತ್ರಿ 8 ಗಂಟೆಯ ವರೆಗೆ ಸ್ವರಾನುಬಂಧ ಸಂಗೀತ ಉತ್ಸವ ನಡೆಯಲಿದೆ.

ಈ ಉತ್ಸವದಲ್ಲಿ ಕಲಾಸಾಧನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಬಳಿಕ ಶ್ರೀಮತಿ ವಿಭಾ ಎಸ್. ನಾಯಕ್ ಮಂಗಳೂರು ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ತಬಲಾದಲ್ಲಿ ವಿಘ್ನೇಶ್ ಪ್ರಭು, ಹಾಗೂ ಹಾರ್ಮೋನಿಯಂನಲ್ಲಿ ಮೇಧಾ ಜಿ. ಭಟ್ ಸಾಥ್ ನೀಡಲಿದ್ದಾರೆ.

ಸಿತಾರ್-ಕೊಳಲು-ತಬಲಾ ಜುಗಲ್ ಬಂಧಿ ಉಸ್ತಾದ್ ರಫೀಕ್ ಖಾನ್ ಮತ್ತು ಪಿ. ಸಮೀರ್ ರಾವ್ ಅವರಿಂದ ಸಿತಾರ್ ಮತ್ತು ಕೊಳಲು ಜುಗಲ್ಬಂದಿ, ಪಂ. ರಾಜೇಂದ್ರ ನಾಕೋಡ್ ಅವರೊಂದಿಗೆ ನಡೆಯಲಿದೆ.ವಯುವ ಕಲಾವಿದರಲ್ಲಿ ಸಂಗೀತದ ಕುರಿತು ಆಸಕ್ತಿ ಹೆಚ್ಚಿಸಲು ಹಾಗೂ ಅವರಿಗೆ ವೇದಿಕೆ ಕಲ್ಪಿಸಲು ಪ್ರತೀ ವರ್ಷ ಸಂಗೀತ ಉತ್ಸವ ಆಯೋಜಿಸಲಾಗುತ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

Exit mobile version