ಉಚ್ಚಿಲ, ಜ. 05: ಬಿಜೆಪಿ ಸೋಮೇಶ್ವರ ಮಹಾಶಕ್ತಿ ಕೇಂದ್ರ ಉಚ್ಚಿಲ ಬೂತ್‌ನ ಅಧ್ಯಕ್ಷರು ಹಾಗೂ ಸ್ನೇಹ ಸಂಗಮ (ರಿ) ಉಚ್ಚಿಲ ಇದರ ಸಕ್ರಿಯ ಸದಸ್ಯರಾದ ಮನೋಜ್ ಕುಮಾರ್ ಉಚ್ಚಿಲ ಅವರು ವಿಧಿವಶ.
ಇವರು ಸ್ನೇಹ ಸಂಗಮದ ಹಲವಾರು ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಅದಲ್ಲದೇ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರನಾಗಿ ಗುರುತಿಸಿಕೊಂಡಿರುವ ಇವರು ಸ್ಥಳೀಯ ಶಾಲಾ ಮಕ್ಕಳಿಗೆ ಕಬಡ್ಡಿ ಕೋಚ್ ಆಗಿ ಹೆಸರು ಮಾಡಿದವರು. ಇವರ ರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧನೆಗೆ ಸ್ನೇಹ ಸಂಗಮ(ರಿ) ಉಚ್ಚಿಲ ಇದರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ರಮಾನಂದ ಸ್ವಾಮೀಜಿ ಅವರು ಸನ್ಮಾನಿಸಿ ಗೌರವಿಸಿದ್ದರು.
ಕೇವಲ ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ ಬೀರಿ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯರಾಗಿದ್ದು ,ಧಾರ್ಮಿಕ ಕಟ್ಟು ಕಟ್ಟಳೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಮನೋಜ್ ಉಚ್ಚಿಲ ಇವರು ಹಲವಾರು ವರ್ಷಗಳಿಂದ ಉಚ್ಚಿಲ ಶ್ರೀ ಧೂಮಾವತಿ ಬಂಟ ದೈವಗಳ ಚಾಕರಿಯಲ್ಲಿ ತೊಡಗಿಸಿಕೊಂಡಿದ್ದರು.
ಇವರು ಮನೆಯವರನ್ನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.