Site icon Ullalavani

ಕಲ್ಲಾಪು ಬುರ್ದುಗೋಳಿ ʻಸಿಂಗಾರ ಸುಗಿಪುʼತುಳು ಭಕ್ತಿಗೀತೆ ವಿಡಿಯೋ ಹಾಡುಗಳನ್ನು ಬಿಡುಗಡೆಗೊಳಿಸಿದ ವಾರಣಾಸಿ ಕಾಶಿ ಮಠದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ

ಉಳ್ಳಾಲ, ಜ:4: ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳದ ಕುರಿತಾದ ʻಸಿಂಗಾರ ಸುಗಿಪುʼ ತುಳು ಭಕ್ತಿಗೀತೆ ವಿಡಿಯೋ ಹಾಡುಗಳ ಬಿಡುಗಡೆಯನ್ನು ವಾರಣಾಸಿ ಕಾಶಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಕ್ಷೇತ್ರದಲ್ಲಿ ಶನಿವಾರ ಜರಗಿದ ವರ್ಷಾವಧಿ ಕೋಲ ಸಂದರ್ಭ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಅಜ್ಜನ ಕ್ಷೇತ್ರದ ಕುರಿತ ವೀಡಿಯೋ ಭಕ್ತಿಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಮನೆಮನೆಗಳಲ್ಲಿ ಈ ಭಕ್ತಿಗೀತೆಗಳು ನಾದಿಸುತ್ತಾ, ಕ್ಷೇತ್ರಕ್ಕೂ ತಂಡಕ್ಕೂ ಉತ್ತಮ ಹೆಸರು ಮತ್ತು ಗೌರವ ದೊರಕಲಿ. ದೈವವನ್ನು ನಂಬುವ ಎಲ್ಲ ಭಕ್ತರೂ ಇದನ್ನು ನೋಡಬೇಕು, ಆಲಿಸಬೇಕು. ಈ ಪ್ರಯತ್ನ ಸುಗ್ಗಿಯಂತೆ ಸಮೃದ್ಧ ಫಲ ನೀಡಲಿ, ದೈವ ಕೃಪೆ ಸದಾ ಇರಲಿ ಎಂದು ಹಾರೈಸಿದರು.ಮಾ. ಅಭಿಷೇಕ್‌ ಕಲ್ಲಾಪು ಹಾಗೂ ಕು.ಸಾನ್ವಿ ಕೊಟ್ಟಾರಿ ಗಾಯನದಲ್ಲಿ ಮೂಡಿಬಂದಿರುವ ಹಾಡುಗಳಿಗೆ ತೋನ್ಸೆ ಪುಷ್ಕಳ್‌ ಕುಮಾರ್‌ ಸಾಹಿತ್ಯ ನೀಡಿದ್ದಾರೆ. ಸಮೀರ್‌ ಮುಡಿಪು ಧ್ವನಿ ಮುದ್ರಣ, ಸಂದೀಪ್‌ ಕಲ್ಲಾಪು ಛಾಯಗ್ರಹಣ, ಸಂಕಲನ, ಪ್ರಚಾರಕಲೆಯನ್ನು ಎಸ್ಎನ್.ಸಿ ಹಾಗೂ ಪುರುಷೋತ್ತಮ್‌ ಕಲ್ಲಾಪು, ಗುರುಪ್ರಸಾದ್‌, ಸಂತೋಷ್‌ ಶೆಟ್ಟಿ, ಸೀತಾರಾಮ ಕಲ್ಲಾಪು ಹಾಗೂ ಕುಟುಂಬ, ನಾರಾಯಣ, ಆನಂದ ಕಲ್ಲಾಪು ಇವರುಗಳ ಸಹಕಾರದೊಂದಿಗೆ ಸುರೇಶ್‌ ಸುಗಂಧಿ ಆಶೀರ್ವಾದದೊಂದಿಗೆ ವೀಡಿಯೋ ಹಾಡು ನಿರ್ಮಾಣಗೊಂಡಿದೆ.

ಬಿಡುಗಡೆ ಸಂದರ್ಭ ಶ್ರೀ ಕ್ಷೇತ್ರ ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಚಂದ್ರಹಾಸ್‌ ಪಂಡಿತ್‌ ಹೌಸ್, ಕಲ್ಲಾಪು ಶ್ರೀ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳ ಸೇವಾ ಟ್ರಸ್‌ನ ಅಧ್ಯಕ್ಷ ವಿಶ್ವನಾಥ್‌ ನಾಯಕ್‌, ಮಧ್ಯಸ್ಥ ದೇವದಾಸ್‌ ಕಾಯಂಗಳ, ನವೀನ್‌ ಕಾಯಂಗಳ, ‌ ಪ್ರಶಾಂತ್ ಕಾಯಂಗಳ, ಪುರುಷೋತ್ತಮ್‌ ಮೇಲಾಂಟ, ಪುರುಷೋತ್ತಮ್ ಕಲ್ಲಾಪು, ಸಂತೋಷ್‌ ಶೆಟ್ಟಿ , ಹರೀಶ್‌ ಕೊಟ್ಟಾರಿ, ಕಮಲಾಕ್ಷ, ಗುರುಪ್ರಸಾದ್‌, ಜಯಶ್ರೀ ಕೊಟ್ಟಾರಿ, ದೀಕ್ಷಾ ಕುತ್ತಾರು, ಅಮಿತಾ, ವನಿತಾ , ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Exit mobile version