Site icon Ullalavani

ರಾಶಿ ರಾಶಿ ಬೂತಾಯಿ ಮೀನುಗಳು ಕಡಲ ತೀರಕ್ಕೆ..!ಅಪರೂಪದ ದೃಶ್ಯ

 ಉಡುಪಿ,ಜ.3: ಹೆಜಮಾಡಿ ಕಡಲ ತೀರದಲ್ಲಿ ಅಪರೂಪದ ದೃಶ್ಯವೊಂದು ಕಂಡುಬಂದಿದ್ದು, ರಾಶಿ ರಾಶಿಯಾಗಿ ಬೂತಾಯಿ ಮೀನುಗಳು ಕಡಲ ತೀರಕ್ಕೆ ಜಿಗಿದು ಬಂದ ಪರಿಣಾಮ ಸ್ಥಳೀಯ ನಿವಾಸಿಗಳಿಗೆ ಮೀನಿನ ಮಹಾ ಸುಗ್ಗಿ ದೊರೆತಿದೆ.


ಕೈರಂಪಣಿ ಬಲೆ ಬೀಸುವ ವೇಳೆ ಸಮುದ್ರದ ತೀರ ಪ್ರದೇಶಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಬೂತಾಯಿ ಮೀನುಗಳು ಜಿಗಿದು ಬಂದಿವೆ. ಅಚ್ಚರಿಯ ಈ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ತೀರ ಪ್ರದೇಶದ ನಿವಾಸಿಗಳು ಕೈಗೆ ಸಿಕ್ಕಿದಷ್ಟು ಮೀನುಗಳನ್ನು ಹೆಕ್ಕಿಕೊಂಡು ಹೋಗಿದ್ದಾರೆ.ಕಡಲ ತೀರದಲ್ಲಿ ಬೂತಾಯಿ ಮೀನುಗಳು ಜಿಗಿಯುತ್ತಿರುವುದು ಹಾಗೂ ಜನರು ಅವುಗಳನ್ನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಅಪರೂಪದ ಘಟನೆ ದೃಶ್ಯ ರಮಣೀಯವೆನಸಿದರೂ ಮಾನವ ಆಹಾರ ಶೃಂಖಲೆಯನ್ನು ಒಂದೊಮ್ಮೆ ನೆನಪಿಸುತ್ತದೆ. ಆದರೂ ಇಂತಹ ಮೀನಿನ ಅಪ್ರತೀಕ್ಷಿತ ಸುಗ್ಗಿ ಕಂಡು ತೀರ ಪ್ರದೇಶದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದು, ಸಮುದ್ರ ನೀಡಿದ ಈ ಪ್ರಕೃತಿ ವರವನ್ನು ಸಂಭ್ರಮದಿಂದ ಸ್ವೀಕರಿಸಿದ್ದಾರೆ.

Exit mobile version