ಉಳ್ಳಾಲ: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕು, ಮಾನವೀಯ ಮೌಲ್ಯಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕೇರಳ ಯಾತ್ರೆ ಆರಂಭಿಸಲಾಗಿದೆ. ಮನುಷ್ಯರೊಂದಿಗ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಯಾತ್ರೆ ನಡೆಯಲಿದೆ. ತಾಜುಲ್ ಉಲಮಾ ಉಳ್ಳಾಲ ತಂಙಳ್ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅದನ್ನು ಉಳಿಸುವ ಕಾರ್ಯ ನಮ್ಮಿಂದ ಆಗಬೇಕು ಎಂದು ಉಳ್ಳಾಲ ಸಂಯುಕ್ತ ಖಾಝಿ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರಾö್ಯಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಅವರು ಮನುಷ್ಯರೊಂದಿಗೆ ಎಂಬ ಧ್ಯೇಯವಾಕ್ಯದಲ್ಲಿ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆಯೋಜಿಸಿರುವ ಕೇರಳ ಯಾತ್ರೆಗೆ ಉಳ್ಳಾಲ ದರ್ಗಾ ಝಿಯಾರತ್‌ನೊಂದಿಗೆ ಚಾಲನೆ ನೀಡಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಮನುಷ್ಯತ್ವ ಉಳಿಯಬೇಕು. ಅರಾಜಕತೆ, ಅಧರ್ಮ ನಮಗೆ ಬೇಡ. ಇದನ್ನು ಅಳಿಸಿ ಜನರು ಸನ್ಮಾರ್ಗದಲ್ಲಿ ನಡೆಯಬೇಕು. ಐಕ್ಯತೆ ಬೆಳೆಯಬೇಕು ಎಂದು ಕರೆ ನೀಡಿದರು.
ಅಸಯ್ಯಿದ್ ಇಬ್ರಾಹೀಮ್ ಖಲೀಲ್ ತಂಙಳ್ ಕಡಲುಂಡಿ ಮಾತನಾಡಿ, ಎ.ಪಿ. ಉಸ್ತಾದ್ ಅವರ ನೇತೃತ್ವದಲ್ಲಿ ಇಂದು ನಡೆಯುವುದು ಮೂರನೇ ಯಾತ್ರೆ ಆಗಿದೆ. ಮನುಷ್ಯರೊಂದಿಗೆ ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡು ಈ ಯಾತ್ರೆ ಆರಂಭಗೊAಡಿದೆ. ಜ.16ರಂದು ತಿರುವನಂತಪುರAನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಈ ಕೇರಳ ಯಾತ್ರೆ ದರ್ಗಾ ಝಿಯಾರತ್‌ನೊಮದಿಗೆ ಆರಂಭಗೊAಡಿದ್ದು, ಉಳ್ಳಾಲ ದರ್ಗಾ ಕರ್ನಾಟಕ ಮತ್ತು ಕೇರಳಕ್ಕೆ ಸೌಹಾರ್ದಕೊಂಡಿಯಾಗಿ ಬೆಳೆಯಲಿದೆ. ಮನುಷ್ಯತ್ವ ಉಳಿಸುವ ನಿಟ್ಟಿನಲ್ಲಿ ನಡೆಯುವ ಈ ಯಾತ್ರೆಯಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಆಟಕೋಯ ತಂಙಳ್ ಕುಮಬೋಲ್, ರಈಸುಲ್ ಉಲಮಾ ಇ.ಸುಲೈಮಾನ್ ಉಸ್ತಾದ್,ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ ಊದ್ ತಂಙಳ್, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಅಶ್ರಫ್ ತಂಙಳ್ ಆದೂರು, ಡಾ.ಹಕೀಮ್ ಅಝ್ಹರಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.