Site icon Ullalavani

ಜ.3ರಂದು ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ `ರಾಷ್ಟ್ರೋತ್ಸವ-2026′

ತೊಕ್ಕೊಟ್ಟು: ಭಾರತೀಯ ಗುರುಕುಲ ಮಾದರಿಯ ಪಂಚಮುಖಿ ಶಿಕ್ಷಣಕ್ಕೆ ಜಿಲ್ಲೆಯಲ್ಲೇ ಉನ್ನತ ಹೆಸರಿರುವ ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಈ ಬಾರಿಯ `ರಾಷ್ಟ್ರೋತ್ಸವ’ ಜನವರಿ 3ರಂದು ಸಂಜೆ 5;30ಕ್ಕೆ ತೊಕ್ಕೊಟ್ಟು ಚೆಂಬುಗುಡ್ಡೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ರಾಣಿ ಅಬ್ಬಕ್ಕ ಚಾವಡಿಯಲ್ಲಿ ನಡೆಯಲಿದೆ.

ಮುಖ್ಯ ಅತಿಥಿಯಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಎಂ,ಎಸ್ ಮೂಡಿತ್ತಾಯ ಆಗಮಿಸಲಿದ್ದಾರೆ. ರಾಷ್ಟೋತ್ಥಾನ ಪರಿಷತ್ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿಗಳಾದ ನಾ.ದಿನೇಶ್ ಹೆಗ್ಡೆ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

Exit mobile version