Site icon Ullalavani

‘ಡ್ರಗ್ ಮಾಫಿಯಾ ರಾಜ್ಯವನ್ನು ಸುತ್ತುವರೆದಿದೆ’ – ಆರ್ ಅಶೋಕ್

ಉಡುಪಿ; ಡ್ರಗ್ ಮಾಫಿಯಾ ರಾಜ್ಯವನ್ನು ಸುತ್ತುವರೆದಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಪತ್ತೆ ಮಾಡಿದ ಮಹಾರಾಷ್ಟ್ರ ಪೊಲೀಸರು ಈ ಸರ್ಕಾರವನ್ನು ತಡೆಯುವ ಕೆಲಸ ಮಾಡಿಲ್ಲ ಎಂದು ಬಿಜೆಪಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಈ ಬಾರಿ ಹೊಸ ವರ್ಷ ಆಚರಣೆ ಅಲ್ಲ. ಈ ಬಾರಿ ಡ್ರಗ್ಸ್ ಸೆಲೆಬ್ರೇಶನ್. ಮಹಾರಾಷ್ಟ್ರ ಪೊಲೀಸರು ಬೆಂಗಳೂರಲ್ಲಿ ರೈಡ್ ಮಾಡಿ, ಕೋಟ್ಯಂತರ ರೂಪಾಯಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದು ನಮ್ಮ ಪೊಲೀಸರಿಗೆ ಯಾಕೆ ಗೊತ್ತಾಗಲ್ಲ?. ಇದಕ್ಕಿಂತ ಅವಮಾನ ಏನಿದೆ?. ಮಹಾರಾಷ್ಟ್ರ ಪೂಲೀಸರು ಎರಡು ಮಹತ್ವದ ಕಾರ್ಯಚರಣೆ ನಡೆಸಿದ್ದಾರೆ.ಈ ಸರ್ಕಾರಕ್ಕೆ ನಾಚಿಕೆ ಆಗಬೇಕು, ಮಾನ ಮರ್ಯಾದೆ ಇದೆಯಾ?. ಕರ್ನಾಟಕದಲ್ಲಿ ಇಂಟಲಿಜೆನ್ಸ್ ಸತ್ತು ಹೋಗಿದೆಯಾ?, ಕರ್ನಾಟಕ ಪೊಲೀಸರ ಸಹಾಯ ಪಡೆದು ಕಾರ್ಯಚರಣೆ ಮಾಡಿದ್ದು ಎನ್ನುತ್ತಿರಿ. ನಿಮಗೆ ಯಾಕೆ ಈ ಮಾಫಿಯಾ ಗೊತ್ತಾಗಿಲ್ಲ?, ಗೃಹ ಸಚಿವರಿಗೆ ಕಾಮನ್ ಸೆನ್ಸ್ ಇಲ್ವಾ?, ಇದು ಬೇಜವಾಬ್ದಾರಿ ಸರ್ಕಾರ, ಮಂಗಳೂರು ಬೆಂಗಳೂರು ಜೈಲಿನಲ್ಲಿ ಡ್ರಗ್ ಪೆಡ್ಲರುಗಳು ತುಂಬಿದ್ದಾರೆ. ಪೊಲೀಸರೇ ಕಳ್ಳರಂತೆ ಮಾಡುತ್ತಾರೆ, ಇದನ್ನು ನಿಯಂತ್ರಿಸಲು ಈ ಸರ್ಕಾರಕ್ಕೆ ಧಮ್ ತಾಕತ್ತು ಇಲ್ಲ ಎಂದು ವ್ಯಂಗ್ಯವಾಡಿದರು.

Exit mobile version