Site icon Ullalavani

ಮಂಗಳೂರು ಪುರಭವನದಲ್ಲಿ ಮಾರುತಿ ಮಾಣಿಕ್ಯ ಮಹೋತ್ಸವ

ಮಂಗಳೂರು;ಉಳ್ಳಾಲ ಮೊಗವೀರಪಟ್ಣ ಮಾರುತಿ ಜನಸೇವಾ ಸಂಘ ಹಾಗೂ ಮಾರುತಿ ಯುವಕ ಮಂಡಲದ 40ನೇ ವರ್ಷದ ಆಚರಣೆಯ ಒಂದು ವರ್ಷದ ಸಮಾಜಮುಖಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಂಗಳೂರಿನ ಪುರಭವನದಲ್ಲಿ ಮಾರುತಿ ಮಾಣಿಕ್ಯ ಮಹೋತ್ಸವ ಸಮಾರೋಪ ಕಾರ್ಯಕ್ರಮ ನಡೆಯಿತು.



ಕಾರ್ಯಕ್ರಮದಲ್ಲಿ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಮಾತನಾಡಿ, ಮೊಗವೀರರು ಸಮುದ್ರವನ್ನು ನಂಬಿಕೊAಡ ಸಾಹಸಿಗರು. ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಸೌಹಾರ್ದಮಯ ವಾತಾವರಣ ನಿರ್ಮಿಸುವ ನೆಲೆಯಲ್ಲಿ ಮೊಗವೀರರ ಪಾತ್ರ ಅಪಾರವಾಗಿದೆ. ಅದರಲ್ಲೂ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದ್ರು.


ಇದೇ ವೇಳೆ ಶಾಸಕರಾದ ಯಶ್ಪಾಲ್ ಸುವರ್ಣ ಮಾತನಾಡಿದ್ದಾರೆ. ಬಳಿಕ ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದ್ರು.

ಮುಖ್ಯ ಅತಿಥಿಗಳಾಗಿ ರಾಜ್ಯ ಅಲೈಡ್ ಹೆಲ್ತ್ ಕೌನ್ಸಿಲ್ ಚೇರ್ ಮ್ಯಾನ್ ಡಾ.ಯು.ಟಿ.ಇಫ್ತಿಕಾರ್, ಮೆಟಲ್ ಗ್ರೂಫ್ ಆಫ್ ಕಂಪೆನೀಸ್ ಬಹರೈನ್ ಚೇರ್‌ಮ್ಯಾನ್ ಅಬ್ದುಲ್ ರಝಾಕ್, ಮೊಗವೀರ ಬಹರೈನ್ ಅಧ್ಯಕ್ಷರಾದ ಶಿಲ್ಪಾ ಶಮಿತ್ ಕುಂದರ್, ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಉದ್ಯಮಿಗಳಾದ ಎಚ್‌ಎಸ್ ನಿಸಾರ್, ಸಿಂಧೂರಾಮ್ ಎ ಪುತ್ರನ್, ಉಡುಪಿಯ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರಾಷ್ಟಿçÃಯ ಕ್ರೀಡಾಪಟು ಸಹನಾ ಕುಮಾರಿ, ಟೆನಿಸ್ ಬಾಲ್ ಕ್ರಿಕೆಟ್ ಅಕಾಡೆಮಿಯ ಪ್ರಮುಖರಾದ ಗೌತಮ್ ಶೆಟ್ಟಿ, ಶರತ್ ಶೆಟ್ಟಿ ಪಡುಬಿದ್ರಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಮತ್ತಿತರರು ಭಾಗಿಯಾಗಿದ್ರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಧನಲಕ್ಷಿö್ಮÃ ಪೂಜಾರಿ, ರವಿಶಂಕರ್ ವಳಕುಂಜ, ದೀಪಾಶ್ರೀ ಎಸ್, ರೆಮೋನಾ ಇವೆಟ್ ಪಿರೇರಾ, ಪ್ರಮೀಳಾ ದೀಪಕ್ ಪೆರ್ಮುದೆ, ಶಮ್ಮಿ ಗಫೂರ್, ವಿದ್ಯಾ ಸಂಪತ್ ಕರ್ಕೆರ ಅವರಿಗೆ ಮಾರುತಿ ಮಾಣಿಕ್ಯ ಸಾಧಕ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಮುಖರಾದ ಅಬ್ದುಲ್ ರಝಾಕ್ ಹೆಜಮಾಡಿ, ಪ್ರಶಾಂತ್ ಅಂಬಲಪಾಡಿ, ಚೇತನ್ ಬೆಂಗ್ರೆ, ಜಾನಕಿ ಪುತ್ರನ್, ನಾಗೇಶ್ ರಾವ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ 250 ವಿದ್ಯಾರ್ಥಿಗಳಿಗೆ 20ಲಕ್ಷ ರೂ ವೆಚ್ಚದಲ್ಲಿ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ಮಂಕಿಸ್ಟಾAಡ್ ಬಳಿಯ ಮಾರುತಿ ಆಸರೆ ಮನೆ ಹಾಗೂ ಉಳ್ಳಾಲ ಉಳಿಯದ ಮಾರುತಿ ಆಶ್ರಯದ ಕರಾರು ಪತ್ರ ಹಸ್ತಾಂತರ, 16 ಪಟ್ನ ಸಭಾದ ಗುರಿಕಾರರಿಗೆ ಸನ್ಮಾನ, ಗೌರವ ಸರ್ಮಪಣೆ ಕಾರ್ಯಕ್ರಮ ನಡೆಯಿತು.

ಇನ್ನು ಈ ಸಂದರ್ಭದಲ್ಲಿ ಮಾರುತಿ ಜನಸೇವಾ ಸಮಘ ಮತ್ತು ಮಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ, ಅಧ್ಯಕ್ಷ ಸಂದೀಪ್ ಪುತ್ರನ್, ಪ್ರಧಾನ ಸಂಚಾಲಕ ಸುಧೀರ್ ಅಮೀನ್, ಪ್ರಧಾನ ಕಾರ್ಯದರ್ಶಿ ಕಪಿಲ್ ಎಸ್ ಬಂಗೇರ, ಉಪಾಧ್ಯಕ್ಷ ಪ್ರಶಾಂತ್ ಬಿ ಉಳ್ಳಾಲ್, ಕಿರಣ್ ಪುತ್ರನ್, ಕೋಶಾಧಿಕಾರಿ ಅನಿಲ್‌ಚರಣ್, ಕಾರ್ಯದರ್ಶಿ ಪವನ್ ಉಳ್ಳಾಲ್, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್, ಜತೆ ಕಾರ್ಯದರ್ಶಿ ಪುನೀತ್ ಬಂಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ರು.

Exit mobile version