Site icon Ullalavani

ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಶಿಧರ್‌ ಪೊಯ್ಯತ್ತಬೈಲ್‌, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್‌ ನಾಯಕ್‌ ಆಯ್ಕೆ

ಉಳ್ಳಾಲ: ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-28 ನೇ ಸಾಲಿನ ಅಧ್ಯಕ್ಷರಾಗಿ ಅಬ್ಬಕ್ಕ ಟಿ.ವಿಯ  ಶಶಿಧರ್‌ ಪೊಯ್ಯತ್ತಬೈಲ್‌ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.


ಪ್ರಧಾನ ಕಾರ್ಯದರ್ಶಿಗಳಾಗಿ ಹೊಸದಿಗಂತ ಪತ್ರಿಕೆಯ ದಿನೇಶ್‌ ನಾಯಕ್‌ ತೊಕ್ಕೊಟ್ಟು, ಉಪಾಧ್ಯಕ್ಷರುಗಳಾಗಿ ವಿಜಯಕರ್ನಾಟಕ ಪತ್ರಿಕೆ  ಸತೀಶ್‌ ಕುಮಾರ್‌ ಪುಂಡಿಕಾಯಿ ಮತ್ತು  ಪೊಸಕುರಲ್‌ ಚಾನೆಲ್‌ ಆಸೀಫ್‌ ಬಬ್ಬುಕಟ್ಟೆ ಪೊಸಕುರಲ್‌, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್‌ ನಾಯಕ್‌,  ಕಾರ್ಯದರ್ಶಿಗಳಾಗಿ ಹೊಸದಿಗಂತ ಪತ್ರಿಕೆಯ ಸತೀಶ್‌ ಕೊಣಾಜೆ ಹಾಗೂ ವಾರ್ತಾಭಾರತಿ ಪತ್ರಿಕೆಯ ಬಶೀರ್‌ ಕಲ್ಕಟ್ಟ,  ಕೋಶಾಧಿಕಾರಿಯಾಗಿ ಕನ್ನಡಪ್ರಭ ಪತ್ರಿಕೆಯ ವಜ್ರ ಗುಜರನ್‌ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉದಯವಾಣಿಯ  ವಸಂತ್‌ ಎನ್‌ ಕೊಣಾಜೆ, ಪ್ರಜಾವಾಣಿಯ ಮೋಹನ್‌ ಕುತ್ತಾರ್‌, ಅಬ್ಬಕ್ಕ ಟಿ.ವಿಯ ಶಿವಶಂಕರ್‌ ಎಂ., ನಮ್ಮೂರ ವಾರ್ತೆಯ ಗಣೇಶ್‌ ತಲಪಾಡಿ, ಅಬ್ಬಕ್ಕ ಟಿ.ವಿಯ ರಜನಿಕಾಂತ್‌ ಸಿ. ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿಗಳಾಗಿ   ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ಉದಯವಾಣಿಯ ಸತೀಶ್‌ ಇರಾ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಅಶೋಕ್‌ ಶೆಟ್ಟಿ ಬ್ರಹ್ಮರಕೂಟ್ಲು ಉಪಸ್ಥಿತರಿದ್ದರು. ಚುನಾವಣಾ ಸಂದರ್ಭ  ಪೊಸಕುರಲ್‌ ಸುದ್ಧಿವಾಹಿನಿಯ  ವಿದ್ಯಾಧರ್‌ ಶೆಟ್ಟಿ,  ಪತ್ರಕರ್ತರಾದ  ಅಶ್ವಿನ್‌ ಕುತ್ತಾರ್‌, ಸುಶ್ಮಿತಾ ಸಾಮಾನಿ ಉಪಸ್ಥಿತರಿದ್ದರು.

Exit mobile version