Site icon Ullalavani

ಹಾರಾಟದ ವೇಳೆ ಏರ್ ಇಂಡಿಯಾ ವಿಮಾನದ ಇಂಜಿನ್ ಸ್ಥಗಿತ – ದೆಹಲಿಗೆ ತುರ್ತು ಭೂಸ್ಪರ್ಶ

ನವದೆಹಲಿ ಡಿ. 22 : ದೆಹಲಿ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಲಭಾಗದ ಇಂಜಿನ್ ಹಾರಾಟದ ವೇಳೆ ಸ್ಥಗಿತಕೊಂಡಿದೆ. ಪರಿಣಾಮ ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಲ್ಲೇ ದೆಹಲಿಗೆ ಮರಳಿದೆ. ಇಂದು ಬೆಳಿಗ್ಗೆ 6:10ಕ್ಕೆ ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ 887 ವಿಮಾನವು 6:52ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಈ ಕುರಿತು ಡಿಜಿಸಿಎ ಮಾಹಿತಿ ನೀಡಿದ್ದು, ವಿಮಾನ ಹಾರಾಟದ ವೇಳೆ ಒಂದು ಇಂಜಿನ್‌ನ ಕಾರ್ಯ ಸ್ಥಗಿತಗೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಲಾಗಿದೆ. ಅವಳಿ ಇಂಜಿನ್ ಹೊಂದಿರುವ ವಿಮಾನಗಳು ಒಂದು ಇಂಜಿನ್ ಮೂಲಕ ಲ್ಯಾಂಡ್ ಆಗಬಹುದು. ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.

Exit mobile version