Site icon Ullalavani

ಡಿ.21ರಂದು ಮುಡಿಪು ಭಾರತಿ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಮುಡಿಪು,ಡಿ.20: ಬೆಳಕು ಚಾರಿಟೇಬಲ್ ಟ್ರಸ್ಟ್ ಮುಡಿಪು ಇವರ ಮುಂದಾಳತ್ವದಲ್ಲಿ ಲಯನ್‌ಕ್ಲಬ್ ಮುಡಿಪು-ಕಿನಾಡು ಫಾ.ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಕಂಕನಾಡಿ-ಮ0ಗಳೂರು ಇದರ ಸಹಯೋಗದೊಂದಿಗೆ ಡಿ.21ರಂದು ಮುಡಿಪು ಭಾರತಿ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಶಿಬಿರವನ್ನು ಎಐಸಿಯು ರಾಜ್ಯಧ್ಯಕ್ಷರು ಹಾಗೂ ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ನಿಕಟಪೂರ್ವ ಅಧ್ಯಕ್ಷರಾದ ಸಲ್ವಿನ್ ಡಿ,ಸೋಜ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಳಕು ಚಾಡಿಟೇಬಲ್ ಟ್ರಸ್ಟ್ (ರಿ.) ಮುಡಿಪು ಇದರ ಅಧ್ಯಕ್ಷರಾದ ಪ್ರಸನ್ನ ಎಂ ಕೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸುನ್ನೀ ಯುವಜನ ಸಂಘ ಮುಡಿಪು ಝೋನ್ ಇದರ ಅಧ್ಯಕ್ಷರಾದ ಬಿಎ ಉಸ್ಮಾನ್ ಸಖಾಫಿ ಕಡ್ವಾಯಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮುಡಿಪು ಕುರ್ನಾಡು ಇದರ ಅಧ್ಯಕ್ಷರಾದ ಅಜಿತ್ ಪಜೀರು, ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕರಾದ ಸಿರಾಜ್, ಮುಡಿಪು ವಿಶ್ವಕರ್ಮ ಸಂಘದ ನಿಕಟಪೂರ್ವ ಅಧ್ಯಕ್ಷರಾದ ನವೀನ ಆಚಾರ್ಯ, ನಟ್ಟಿಹಿತ್ಲು ಕನ್ಸಸ್ಟçಕ್ಷಮ್ ಮುಡಿಪು ಇದರ ಅರುಣ್ ಡಿಸೋಜ, ಭಾರತಿ ಶಾಲೆ ಮುಡಿಪುವಿನ ಅಧ್ಯಕ್ಷರಾದ ಕೆ.ಎಸ್.ಭಟ್, ಸಾಮಾಜಿಕ ಕಾರ್ಯಕರ್ತರಾದ ದಯಾನಂದ್ ಆಚಾರ್ಯ, ವಕೀಲರು ಹಾಗೂ ಮಂಗಳೂರು ವಕೀಲ ಕಾರ್ಯಕಾರಿ ಸಂಘದ ಸದಸ್ಯರಾದ ಮಹಮ್ಮದ್ ಅಸ್ಗರ್ ಭಾಗವಹಿಸಲಿದ್ದಾರೆ.

ನರಿಂಗಾನ,ಡಿ.20: ನರಿಂಗಾನ ಕಲ್ಲರಕೋಡಿ ಸರ್ಕಾರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರೆಂದೇ ಕರೆಸಿಕೊಳ್ಳುತ್ತಿದ್ದ ಪ್ರಭಾಕರ್ ಜೋಗಿ ಅವರು ಮಾಡೂರು ಸಮೀಪದ ಕೊಂಡಾಣದಲ್ಲಿರುವ ತನ್ನ ಸ್ವಂತ ನಿವಾಸದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಭಾಕರ ಜೋಗಿಯವರು ಉಳ್ಳಾಲ ತಾಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು, ವಿದ್ಯಾರ್ಥಿಗಳು ಮೆಚ್ಚಿದ ಶಿಕ್ಷಕರಾಗಿದ್ದರು. ಅದಲ್ಲದೇ ದೈಹಿಕ ಶಿಕ್ಷಕರ ಸಂಘಟನೆಗಳಲ್ಲಿಯೂ ಗುರುತಿಸಿಕೊಂಡವರಾಗಿದ್ದರು. ಸರಳ, ಸಜ್ಜನಿಕೆಯ ಸ್ವಭಾವವುಳ್ಳವರು, ಒರ್ವ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳುವ ಸ್ಥಾನದಲ್ಲಿದ್ದ ಜೋಗಿಯವರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜವಾಗಿಯೂ ದರಂತವೇ ಸರಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಪ್ರಭಾಕರ ಜೋಗಿಯವರು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.

Exit mobile version