ಉಳ್ಳಾಲ; ಇವತ್ತು ಎಳವೆಯಲ್ಲೇ ಮಕ್ಕಳಿಗೆ ಮಧುಮೇಹ,ಒತ್ತಡ, ಆತಂಕ ,ಖಿನ್ನತೆ, ನಿದ್ರೆ ಬಾರದೇ ಇರುವುದು , ತೂಕ ಕಡಿಮೆಯಾಗುವುದು ಮುಂತಾದವುಗಳು ಕಾಣಿಸಿಕೊಳ್ಳುವುದು ದೈಹಿಕ ವ್ಯಾಯಾಮದ ಕೊರತೆಯಿಂದಾಗಿ. ಹಾಗಾಗಿ ಪ್ರತಿನಿತ್ಯ ಮಕ್ಕಳುಗಂಟೆಯಾದರೂ ದೈಹಿಕ ಚಟುವಟಿಕೆಗಳೊಂದಿಗೆ ವ್ಯಾಯಾಮಕ್ಕೆ ಆದ್ಯತೆ ನೀಡಬೇಕು ಇದರಿಂದ ಫಿಟ್ನೆಸ್ ನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ ಯಾವಾಗ ದೇಹ ವಿಟ್ನಸ್ ನಲ್ಲಿ ಇರುತ್ತದೆ ಆವಾಗ ರೋಗನಿರೋಧಕ ಶಕ್ತಿಯನ್ನು ಕೂಡ ಬಲಪಡಿಸಬಹುದು ಎಂದು ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕರ‍್ಯರ‍್ಶಿ ತ್ಯಾಗಮ್ ಹರೇಕಳ ಅಭಿಪ್ರಾಯ ಪಟ್ಟರು
ಇವರು ಉಚ್ಚಿಲ ಬೋವಿಸ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರಿಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರೂರ ಬೋವಿ ಮಹಾಸಭಾ ಸೋಮೇಶ್ವರ ಉಚ್ಚಿಲ ಇದರ ಅಧ್ಯಕ್ಷರು ಹರೀಶ್ ಟಿ ಉಚ್ಚಿಲ್ ಇವರು ವಹಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವದೊಂದಿಗೆ ತಾಳ್ಮೆ, ಏಕಾಗ್ರತೆ, ಸಮಯ ಪ್ರಜ್ಞೆ ಗುಣಗಳು ಅಭಿವೃದ್ಧಿ ಯಾಗುತ್ತದೆ ಎಂದರು.
ಧ್ವಜರೋಹಣವನ್ನು ಸೋಮೇಶ್ವರ ಪುರಸಭೆಯ ಸದಸ್ಯರು ಜಯಶ್ರೀ ನೆರವೇರಿಸಿಕೊಟ್ಟರು
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ವಿಜಯಕುಮಾರ್ ಉಚ್ಚಿಲ್ , ಮಾಜಿ ಕ್ರೀಡಾಪಟು ಉಮೇಶ್ ಉಚ್ಚಿಲ್ , ಶಾಲಾ ಸಂಚಾಲಕರು ಕರುಣಾಕರ ಜೆ ಉಚ್ಚಿಲ್ , ಆಡಳಿತ ಮಂಡಳಿಯ ಕೋಶಾಧಿಕಾರಿ ಲತೀಶ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಮುರಳಿ ಮೋಹನ್ ಉಚ್ಚಿಲ್, ಸದಸ್ಯರಾದ ಚಿದಾನಂದ್ ಉಚ್ಚಿಲ್, ಪ್ರಭೋದ್ ಉಚ್ಚಿಲ್, ಸಚಿನ್ ಉಚ್ಚಿಲ್, ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷೆ ಪ್ರತಿಭಾ ಡಿ ಭಟ್, ಅನುದಾನಿತ ಉಚ್ಚಿಲ ಭೋವಿ ಶಾಲಾ ಮುಖ್ಯ ಶಿಕ್ಷಕಿ ಮೇಘಲತಾ ಉಚ್ಚಿಲ್ , ಉಚ್ಚಿಲ ಭೋವಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ್ ದಾಸ್ ರೈ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು.