Site icon Ullalavani

ಯಶಸ್ವಿಯಾಗಿ ನಡೆದ ಇನೀಝಿಯೋ-2025ರ ವಾರ್ಷಿಕ ಕ್ರೀಡಾಕೂಟ

ಉಳ್ಳಾಲ; ಉಳ್ಳಾಲ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಪದವಿಪೂರ್ವ ಕಾಲೇಜು, ಉಳ್ಳಾಲದಲ್ಲಿ ಇನೀಝಿಯೋ 2025ರ ವಾರ್ಷಿಕ ಕ್ರೀಡಾಕೂಟವು ಉದ್ಘಾಟನೆಗೊಂಡು, ಸಮಾರೋಪ ಸಮಾರಂಭವು ನಡೆಯಿತು. ಮುಖ್ಯ ಅತಿಥಿಯಾಗಿ ಭಾಗಿಯಾದ ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಸೈನ್ಸ್ ಅಧ್ಯಕ್ಷ ಯು.ಟಿ ಇಫ್ತಿಕಾರ್ ಫರೀದ್ ಅವರು ವಿದ್ಯಾರ್ಥಿಗಳನ್ನುದ್ದೇಸಿಸಿ ಮಾತನಾಡಿದರು.

ಕ್ರೀಡಾ ಮನೋಭಾವದಿಂದ ಆಟ ಆಡಬೇಕು, ಗೆಲುವು ಮತ್ತು ಸೋಲು ಒಂದೇ ನಾಣ್ಯದ ಎರಡು ಮುಖ ಇದ್ದಂತೆ, ನಿಮ್ಮ ಜೀವನದಲ್ಲಿ ಗುರಿ ಇರಬೇಕು, ನಮ್ಮಲ್ಲಿ ಸಾಧನೆ ಮಾಡಿದ ಬಹಳಷ್ಟು ಜನ ಇದ್ದಾರೆ ಅವರನ್ನು ಅನುಸರಿಸಿದಾಗ ಜೀವನದಲ್ಲಿ ಮುಂದೆ ಬರುತ್ತೀರಿ, ನಿಮ್ಮ ಜೀವನ ಉಜ್ವಲವಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಇಸ್ಲಾಹಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಅಬ್ದುಲ್ ರಜಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈದಾನದಲ್ಲಿ ವಿದ್ಯಾರ್ಥಿಗಳ ಉತ್ಸಾಹ, ಉಲ್ಲಾಸ ಅವರಲ್ಲಿರುವ ಶಕ್ತಿ ತನ್ಮಯತೆಯನ್ನು ತೋರಿಸುತ್ತದೆ, ಕ್ರೀಡಾಕೂಟದಿಂದ ವಿದ್ಯಾರ್ಥಿಗಳ ಶಿಸ್ತು ಬದ್ಧತೆ, ಕ್ರೀಡಾ ಸ್ಪೂರ್ತಿ ಬೆಳೆಸಲು ಸಾಧ್ಯ ಎಂದು ನಮ್ಮ ನಂಬಿಕೆಯಾಗಿದೆ, ಹಾಗೆಯೇ ಅವರ ದೈಹಿಕ ಕ್ಷಮತೆಯಿಂದ ಮುಂದಿನ ದಿನಗಳಲ್ಲಿ ಬದುಕಿನ ಸವಾಲುಗಳನ್ನು ಧೈರ್ಯ ಮತ್ತು ಬುದ್ದಿವಂತಿಕೆಯಿAದ ಎದುರಿಸಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಸೈನ್ಸ್ ಅಧ್ಯಕ್ಷ ಯು.ಟಿ ಇಫ್ತಿಕಾರ್ ಫರೀದ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಇಸ್ಲಾಹಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಭಾಷಾ, ಸ್ಥಾಪಕ ಟ್ರಸ್ಟಿ ಯು.ಎನ್ ಅಬ್ದುಲ್ ರಜಾಕ್, ಕಾರ್ಯದರ್ಶಿ ಅಹಮ್ಮದ್ ಕುಂಞ ಎಂ, ಟ್ರಸ್ಟಿಗಳಾದ ಕೆ. ಅಬ್ದುಲ್ ಲತೀಫ್, ಎಂ ಇಬ್ರಾಹಿಂ ಫಕೀರ್, ಕೆಎಚ್ ಸಲೀಂ, ಫಿರೋಜ್ ಅಬ್ದುಲ್ ರಜಾಕ್, ಹುರೈರ್ ಅಬ್ದುಲ್ ರಹಿಮಾನ್ ಭಾಷಾ, ಇಬ್ರಾಹಿಂ ಸೌಶಾದ್, ಆಡಳಿತ ಅಧಿಕಾರಿ ಆಯಿಶಾ ಸಬೀನಾ ಕೈಸಿರನ್, ಪ್ರಾಂಶುಪಾಲರಾದ ಸುಮಂಗಲ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ, ಮ್ಯಾನೇಜರ್ ಅನಿಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಿತಾಶ ಅಬಿದ್ ಜಲೀಲ್ ಕಾರ್ಯಕ್ರಮವನ್ನು ನಿರೂಪಿಸಿದರು, ಮೂನಿಸ್ ಸ್ವಾಗತಿಸಿದರು, ಚೈತ್ರ ವಂದಿಸಿದರು.

Exit mobile version