Site icon Ullalavani

ಡಿ.20ರಂದು ಕಿನ್ಯಾ ಗ್ರಾ.ಪಂ.2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

ಉಳ್ಳಾಲ,ಡಿ,18: ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಡಿ.20ರಂದು ಬೆಳಗ್ಗೆ 10;30ಗಂಟೆಗೆ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ಮೆಮೋರಿಯಲ್ ಮದ್ರಸ ಮೀಂಪ್ರಿ ಕಿನ್ಯಾ ಇದರ ಸಭಾಂಗಣದಲ್ಲಿ ನಡೆಯಲಿದೆ.

ಮಂಗಳೂರು ಗ್ರಾಮಾಂತರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯ ಮಾರ್ಗದರ್ಶನದಲ್ಲಿ ಗ್ರಾಮಸಭೆ ನಡೆಯಲಿದೆ.

ಕಾರ್ಯಸೂಚಿ ಈ ಕೆಳಗಿನಂತಿದೆ

1 ಹಿಂದಿನ ಗ್ರಾಮ ಸಭೆಯ ನಡವಳಿಯನ್ನು ಸಭೆಯಲ್ಲಿ ಓದಿ ಹೇಳುವುದು.
2 ಹಿಂದಿನ ಗ್ರಾಮ ಸಭೆಯ ದಿನಾಂಕದ ನಂತರ ಗ್ರಾಮ ಪಂಚಾಯತಿಯ ಚಟುವಟಿಕೆಗಳ ಬಗ್ಗೆ ವರದಿ ನೀಡುವುದು.
3 ವಾರ್ಡ್ ಸಭೆಗಳ ನಡವಳಿಯನ್ನು ಓದಿ ಹೇಳುವುದು.

  1. ಗ್ರಾಮದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ವಸೂಲಿ ಮಾಡಿದ ತೆರಿಗೆ ಮತ್ತು ಬಾಕಿ ಉಳಿದಿರುವ ತಗಾದೆ ವಿವರಗಳು
  2. ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ನೋಂದಾಯಿಸಲಾದ ಜನನ/ಮರಣಗಳನ್ನು ಗ್ರಾಮ ಲೆಕ್ಕಿಗರು ಪ್ರಕಟಿಸಿದ್ದು ಅದರಲ್ಲಿ ಯಾವುದೇ ಜನನ/ಮರಣಗಳು ನೋಂದಾಯಿಸಲ್ಪಡದೇ ಇದ್ದಲ್ಲಿ ಇವುಗಳು ವಿವರ ಪಡೆಯುವುದು
  3. ಗ್ರಾಮದಲ್ಲಿನ ಆಸ್ಪತ್ರೆ ಹಾಗೂ ಪಶು ವೈದ್ಯ ಶಾಲೆಗಳ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿ ಜನರ ಹಾಗೂ ಜಾನುವಾರುಗಳ ಆರೋಗ್ಯದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ.
  4. ಕಳೆದ ಒಂದು ವರ್ಷದಲ್ಲಿ ಗ್ರಾಮಕ್ಕೆ ವಿವಿಧ ಯೋಜನೆಗಳಲ್ಲಿ ನೀಡಲಾದ ಅನುದಾನ ಹಾಗೂ ಅವುಗಳನ್ನು ವೆಚ್ಚ ಮಾಡಿದ ವಿವರ.
  5. ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ಗ್ರಾಮ ಪಂಚಾಯತಿಯ ಗ್ರಾಮ ನೀರು ಪೂರೈಕೆ ಮತ್ತು ನೈರ್ಮಲ್ಯ ಸಮಿತಿಯಿಂದ ಗ್ರಾಮಕ್ಕೆ ಮಾಡಿದ ವೆಚ್ಚ ಹಾಗೂ ಕೈಗೊಂಡ ಕ್ರಮ.
  6. ಗ್ರಾಮದ ವ್ಯಾಪ್ತಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಿರುವ ಬಗ್ಗೆ ಹಾಗೂ ಸಹಾಯಧನ ನೀಡಿರುವ ಬಗ್ಗೆ ವಿವರ.
  7. ಗ್ರಾಮದ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಚಟುವಟಿಕೆಗಳ ಬಗ್ಗೆ ಚರ್ಚೆ
  8. ಗ್ರಾಮ ಪಂಚಾಯತ್‌ಯ ವಿವಿಧ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಗ್ರಾಮದ ಫಲಾನುಭವಿಗಳ ಆಯ್ಕೆ.
  9. ಮುಂದಿನ ಆರ್ಥಿಕ ವರ್ಷದಲ್ಲಿ ಗ್ರಾಮ ಪಂಚಾಯತಿನಿAದ ಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸುವುದು.
  10. ಗ್ರಾಮಸ್ಥರಿಂದ ಸಲಹೆ, ಸೂಚನೆ, ಮನವಿ.
  11. ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳು

ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಭಾಗಿಯಾಗಿ ತಮ್ಮ ಸಮಸ್ಯೆಗಳನ್ನು ಹಾಗೂ ಸೂಕ್ತ ಸಲಹೆಗಳನ್ನು ನೀಡಬಹುದಾಗಿದೆ.

Exit mobile version