ಉಳ್ಳಾಲ, ಡಿ.18: ಕರಾವಳಿ ಕರ್ನಾಟಕ ಸಾಹಿತ್ಯ- ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವ -2025, ಡಿ.20ರಂದು ಗ್ರೀನ್ ಗ್ರೌಂಡ್ ದೇರಳಕಟ್ಟೆಯಲ್ಲಿ ನಡೆಯಲಿದೆ ಎಂದು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ. ಇವರು ಉಳ್ಳಾಲದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರತ್ನೋತ್ಸವ ಬೆಳಿಗ್ಗೆ 9ಗಂಟೆಗೆ ಆರಂಭವಾಗಲಿದ್ದು, ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿಗಳು, ವಿಶ್ರಾಂತ ಪ್ರಾಧ್ಯಪಕದ ಡಾ. ನರೇಂದ್ರ ರೈ ದೇರ್ಲರವರನ್ನು ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಪಂಚಾಯತ್ ವಠಾರದಿಂದ ಪೂರ್ಣ ಕುಂಭ ಕಲಸ,ಚೆಂಡೆ ವಾದನ, ಕೊಂಬು ಕಹ ವೀರಗಾಸೆ, ಕಂಸಾಲೆ, ಹಾಲಕ್ಕಿ, ಹುಲಿವೇಷ, ಪೂಜಾ ಕುಣಿತ, ಬಣ್ಣದ ಕೊಡೆ, ಸೌತ ಗೈಡ್ಸ್ ವಿದ್ಯಾರ್ಥಿಗಳ ಜೊತೆಗೆ ಮೆರವಣಿಗೆಯೊಂದಿಗೆ ದೇರಳಕಟ್ಟೆ ಗ್ರೀನ್ ಗೌಂಡ್‌ಗ ಕರೆತರಲಾಗುವುದು. ಬಳಿಕ ರತ್ನ ಎಜುಕೇಶನ್ ಟ್ರಸ್ಟ್ನ ಕೋಶಾಧಿಕಾರಿ ರತ್ನವತಿ ಶೆಟ್ಟಿ ದ್ವಜಾರೋಹಣ ಮಾಡಿ, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪಿ. ಶ್ರೀನಾಥ್, ಉಳ್ಳಾಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಯುವ ಉದ್ಯಮಿ ಜಗದೀಶ್ ಆಳ್ವ ಕುವೆತ್ತಬೈಲ್, ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಸೂಡಿ ಸುರೇಶ ಬೆಂಗಳೂರು, ಬೆಲ್ಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಬದ್ಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಳ್ಳಿಗ್ಗೆ 10.30 ಗಂಟೆಗೆ ಜಾನಪದ ನಲಿಕೆ, ದಫ್ ಪ್ರದರ್ಶನ ನಡೆಯಲಿದ್ದು ಬೆಳಿಗ್ಗೆ 11.00 ಗಂಟೆಗೆ ಕನ್ನಡ ಮನಸ್ಸು, ಜಾಗೃತಿಗೋಷ್ಠಿ ನಡೆಯಲಿದ್ದು ಕನ್ನಡ ನಾಡಿನ ಪರಂಪರೆ ಬಗ್ಗೆ ಶ್ರೀ ಮತಿ ಸಾಯಿಸುಮ ನಾವಡ ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಪ್ರಶಾಂತಿ ಶೆಟ್ಟಿ ‘ ಇರುವೈಲು, ಕನ್ನಡ ಸಂಸ್ಕೃತಿಯ ಆದರ್ಶದ ಬಗ್ಗೆ ಡಾ. ಪ್ರಭಾತ್ ನಲ್ನಾಡ್ ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ನಮ್ಮ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ 2.00 ಗಂಟೆಗೆ ಹೃದಯ ಕವಿ ಮನ್ಸೂರ್ ಮುಲ್ಕಿರವರ ಅಧ್ಯಕ್ಷತೆಯಲ್ಲಿ ಬಾಲಕೃಷ್ಣ ಬೆರಿಕೆ, ವಾಣಿ ಲೋಕಯ್ಯ ಲಕ್ಷ್ಮೀ ವಿ ಭಟ್ಸ್ ಮಂಜೇಶ್ವರ, ಅನ್ನಪೂರ್ಣ ಕುತ್ತಾನೆ, ಸಲೀಂ ಸುಳ್ಯ ಕವಿಗಳಿಂದ ಬಹು ಭಾಷ ಕವಿಗೋಷ್ಠಿ ನಡೆಯಲಿದೆ ಎಂದರು.
ಅಪರಾಹ್ನ 3.30 ಗಂಟೆಗೆ ನಮ್ಮ ವಿದ್ಯಾರತ್ನ ಶಾಲಾ ವಿದ್ಯಾರ್ಥಿಗಳಿಂದ ಅಶ್ವತ್ ಮಂಜನಾಡಿ ನಿರ್ದೇಶನ ಮಾಡಿದ ‘ಶರಣ ರತ್ನ’ ಎಂಬ ಯಕ್ಷಗಾನ ನಡೆಯಲಿದೆ. ಸಂಜೆ 4.30 ಗಂಟೆಗೆ ನಡೆಯಲಿರುವ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಪ್ರತಿಷ್ಠಿತ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರತಿಷ್ಠಿತ ವಿದ್ಯಾರತ್ನ ಪ್ರಶಸ್ತಿಯನ್ನು ಸಮ್ಮೇಳನ ಅಧ್ಯಕ್ಷರಾದ ನರೇಂದ್ರ ರೈ ದೇರ್ಲ, ಸ್ಪೀಕರ್ ಡಾ. ಯು.ಟಿ.ಖಾದರ್, ಶಾಸಕರಾದ ವೇದವ್ಯಾಸ್ ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತ ಡಿ.ಎಸ್ ಗಟ್ಟಿ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೆಶಕರಾದ ಕೆ.ಟಿ.ಸುವರ್ಣ, ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಪ್ರತಾಪ್ ಕುಮಾರ್ ಜೋಗಿ ಚಿತ್ರದುರ್ಗ, ರೋಟರಿ ಜಿಲ್ಲೆ 3181ರ ಮಜಿ ಗವರ್‌ನರ್ ವಿಕ್ರಮ ದತ್ತ, ಬೆಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಎಂ. ಮೊಹಮ್ಮದ್ ಹನೀಪ್ ಮುಂತಾದ ಗಣ್ಯರ ಸಮಕ್ಷಮದಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಇದರ ಸಂಸ್ಥಾಪಕರಾದ ಯಕ್ಷಧ್ರುವ ಪಟ್ಲ ಗುತ್ತು ಸತೀಶ್ ಶೆಟ್ಟಿಯವರಿಗೆ ನೀಡಲಾಗುವುದು.
ಬಳಿಕ ಸಂಜೆ 6.00 ಗಂಟೆಗೆ ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಆ ಗಣೇಶ್‌ರವರಿಂದ ಮಸ್ತ್ ಮ್ಯಾಜಿಕ್ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲಾ ಮುಖ್ಯೋಪಾಧ್ಯಯರು ನಝೀಮ್ ಹಮೀದ್, ರತ್ನ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕ ಭವಿತ್ ಸುವರ್ಣ, ರವಿ ಕುಮಾರ್ ಕೋಡಿ, ಉಪಸ್ಥಿತರಿದ್ದರು.