ಡಿ.17, ಮಂಗಳೂರು: ಇತ್ತೀಚೆಗೆ ಮಂಗಳೂರು ಜಂಕ್ಷನ್ ರೈಲ್ವೇ ಸ್ಟೇಷನ್ ಸಮೀಪ ಬಾಡಿಗೆ ಸ್ಕೂಟರ್ ಸೇವೆಗಳನ್ನು ಆರಂಭಿಸಿದ್ದ ಆದೇಶ್ ಮತ್ತು ರಜನೀಶ್ ಅಮೀನ್ ಮಾಲಕತ್ವದ ಸ್ಕೂಟ್ಝ್ ಸಂಸ್ಥೆ ಇದೀಗ ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ಸಮೀಪ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಿದೆ.
ಸಭಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಗಣ್ಯರು ಚಾಲನೆಯನ್ನು ನೀಡಿದ್ರು. ಬಳಿಕ ಪಾಲಕ್ಕಾಡ್ ರೈಲ್ವೇ ಸ್ಟೇಷನ್ ಸೀನಿಯರ್ ಡಿವಿಶನಲ್ ಕಮರ್ಷಿಯಲ್ ಮ್ಯಾನೇಜರ್ ಡಾ.ಅರುಣ್ ಥೋಮಾಸ್ ಮಾತನಾಡಿ, ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಶಾಖೆ ಹೊಂದಿದ್ದು, ಇದೀಗ ಸೆಂಟ್ರಲ್‌ನಲ್ಲಿ ಎರಡನೇ ಶಾಖೆಯನ್ನು ಆರಂಭಿಸಿದೆ. ಉದ್ಯಮಿಗಳಿಗೆ, ಪ್ರವಾಸಿಗರಿಗೆ ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಆರಾಮದಾಯಕವಾಗಿ ಓಡಾಡಲು ಸ್ಕೂಟರ್ ಬೆಸ್ಟ್ ಒಪ್ಶಂಗ್ ಆಗಿದ್ದು, ಪ್ರೇಕ್ಷಣಿಯ ಸ್ಥಳಗಳಿಗೆ ತಲುಪಲು ಪೂರಕವಾಗಿದೆ. ಇವಿ ಸ್ಕರ‍್ಸ್ ಲಭ್ಯವಿದ್ದು, ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗತ್ತೆ, ಜೊತೆಗೆ ಬೆಸ್ಟ್ ಮೆಮೋರಿಸ್ ನಿಮ್ಮದಾಗತ್ತೆಅಂತ ಹೇಳಿದ್ದಾರೆ.
ಬಳಿಕ ವಕೀಲರಾದ ಶ್ರೀಧರ್ ಶೆಟ್ಟಿ ಪುಲ್ಲಿಂಚ ಅವರು ಮಾತನಾಡಿ, ಆದೇಶ್ ಅವರನ್ನು ಬಹಳ ಹತ್ತಿರದಿಂದ ಬಲ್ಲವನು. ಯಾವುದೇ ವ್ಯವಹಾರಗಳನ್ನು ನಡೆಸುವುದು ಸುಲಭದ ವಿಚಾರವಲ್ಲ. ವ್ಯವಹಾರಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ ಆ ವ್ಯವಹಾರಗಳನ್ನು ಮುಂದುವರೆಸಿಕೊAಡು ಯಶಸ್ಸು ಕಾಣುವುದು ನಿಜವಾದ ವ್ಯವಹಾರ. ಇವರ ಮಾಲಕತ್ವದಲ್ಲಿ ಇನ್ನಷ್ಟು ಶಾಖೆಗಳು ಆರಂಭವಾಗಲಿ ಎಂದು ಶುಭ ಹಾರೈಸಿದ್ರು.
ಸ್ಕೂಟ್ಝ್ ಸಂಸ್ಥೆಯ ಮಾಲಕರಾದ ಆದೀÃಶ್ ಮಾತನಾಡಿ, ಶಾಖೆಯನ್ನು ಆರಂಭಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಗಣ್ಯರು ನೂತನ ಶಾಖೆಗೆ ಶುಭಹಾರೈಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮಂಗಳೂರು ರೈಲ್ವೇ ಇಲಾಖೆ ಏರಿಯಾ ಆಫೀಸರ್ ರಾಕೇಶ್ ಕುಮಾರ್ ಪಾಠಕ್, ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ಕಮರ್ಷಿಯಲ್ ಮ್ಯಾನೇಜರ್ ಸುರೇಶನ್, ಮಂಗಳೂರು ರೈಲ್ವೇ ಇಲಾಖೆ ವಾಣಿಜ್ಯ ನಿರೀಕ್ಷಕ ಮುಬಶೀರ್, ಅಡುಗೆ ನಿರೀಕ್ಷಕ ಅಫಿನ್ ರಾಜ್, ಸ್ಟೇಷನ್ ಮ್ಯಾನೇಜರ್ ಸುಮೇರ್ ಸಿಂಗ್ ಮೀನಾ, ಆರೋಗ್ಯ ನಿರೀಕ್ಷಕ ಚಂದ್ರೇಶ್, ಸ್ಕೂಟ್ಝ್ ಸಂಸ್ಥೆಯ ಮಾಲಕರಾದ ಆದೇಶ್, ರಮ್ಯ ರಜನೀಶ್ ಅಮಿನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಮಾ ರಿತೇಶ್ ಕಾರ್ಯಕ್ರಮ ನಿರೂಪಿಸಿದರು.
ಆದೀಶ್ ಮತ್ತು ರಜನೀಶ್ ಮಾಲಕತ್ವದ ಸ್ಕೂಟ್ಝ್ ಸಂಸ್ಥೆಯು ಪ್ರವಾಸಿಗರಿಗೆ ಓಡಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಇಂತಹದೊAದು ಸೇವೆಗೆ ಮುಂದಾಗಿದ್ದು, ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಗ್ತಾಯಿದೆ. ಪ್ರವಾಸಿಗರಿಗೆ ಇದೊಂದು ಬೆಸ್ಟ್ ಸೇವೆಯಾಗಿದೆ. ಒಟ್ಟು 4 ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸ್ಕೂಟ್ಝ್ ಕಂಪೆನಿ ಗ್ರಾಹಕರಿಗೆ ನಗುಮೊಗದ ಸೇವೆಗಳನ್ನು ನೀಡುವ ಮೂಲಕ ತನ್ನದೇ ಬ್ರಾö??ಂಡ್‌ನ್ನು ಸೃಷ್ಠಿಸಿಕೊಂಡಿದೆ.
