ತೊಕ್ಕೊಟ್ಟು: ಮಣಿಪಾಲ -ವಿಟ್ಲ ಮಾರ್ಗ ಮಧ್ಯೆ ಸಂಚರಿಸುವ ಕೊಹಿನೂರ್ ಸರ್ವಿಸ್ ಬಸ್ಸ್ ತೊಕ್ಕೊಟ್ಟು ಜಂಕ್ಷನ್ ಬಸ್ಸ್ ನಿಲ್ದಾಣಕ್ಕೆ ಬಸ್ಸ್ ಚಾಲಕ ಕರ್ಕಶ ಹಾರ್ನ್ ಹಾಕುತ್ತಾ ಬಂದಾಗಲೇ ರಿಕ್ಷಾ ಚಾಲಕರು ಕರ್ಕಶ ಹಾರ್ನ್ ವಿರುದ್ಧ ಚಾಲಕನ ಬಳಿ ಮಾತನಾಡಿದ್ದಾರೆ.
ULLALAVANI
ಆದರೆ ಚಾಲಕ ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೇ ಪ್ರಯಾಣಿಕರನ್ನು ಪಿಕ್‌ಆಪ್ ಮಾಡಿ ಬಸ್ಸ್ ಚಾಲಕ ಹೊರಟಿದ್ದಾರೆ. ಇದರಿಂದ ಗರಂ ಆದ ರಿಕ್ಷಾ ಚಾಲಕರು ಬಸ್ಸನ್ನು ಹಿಂಬಾಲಿಸಿ ರಸ್ತೆಯಲ್ಲೇ ಅಡ್ಡಗಟ್ಟಿದ್ದಾರೆ. ಬಳಿಕ ಬಸ್ಸ್ ಚಾಲಕ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯಗಳಲ್ಲಿ ಪರ-ವಿರೋಧ ಚರ್ಚೆಗಳು ಕೇಳಿಬರುತ್ತಿದೆ.