Site icon Ullalavani

ಕಾಪಿಕಾಡು ಶ್ರೀಉಮಾಮಹೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವ; ಆಮಂತ್ರಣ ಪತ್ರಿಕೆ ಲೋಕಾರ್ಪಣೆ

ಉಳ್ಳಾಲ, ಡಿ. 15: ಉಮಾಮಹೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲರೂ ನಮ್ಮ ಅಮೂಲ್ಯ ಸಮಯವನ್ನು ಮೀಸಲಿಡಬೇಕಿದೆ. ಅನೇಕ ಯಶಸ್ವಿ ಕಾರ್ಯಕ್ರಮಗಳನ್ನ ಸಂಘಟಿಸಿದ ಅನುಭವಸ್ಥರೇ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿದ್ದಾರೆ. ಇಂದು ಬಿಡುಗಡೆಗೊಳಿಸಿದ ಆಮಂತ್ರಣ ಪತ್ರಿಕೆಯನ್ನ ಸೀಮಿತ ಅವಧಿಯೊಳಗೆ ಎಲ್ಲರ ಮನೆಗಳಿಗೂ ತಲುಪಿಸಬೇಕಿದೆಯೆಂದು ಕಾಪಿಕಾಡು ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕರೆ ನೀಡಿದರು.

ತೊಕ್ಕೊಟ್ಟು ಸಮೀಪದ ಕಾಪಿಕಾಡುವಿನ ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಶ್ರೀ ಭಧ್ರಕಾಳಿ ದೇವರ ಪ್ರತಿಷ್ಠೆಯು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ 2026ರ ಫೆ. 1ರಿಂದ 6ರ ತನಕ ಜರುಗಲಿದ್ದು, ಆ ಪ್ರಯುಕ್ತ ಉಮಾಮಹೇಶ್ವರಿ ಕ್ಷೇತ್ರದಲ್ಲಿ ರವಿವಾರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಬಹುಮುಖ್ಯವಾಗಿ ಆರ್ಥಿಕ ಸಂಪತ್ತು ಕ್ಷೇತ್ರಕ್ಕೆ ಹರಿದು ಬರಬೇಕಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದಾಗ ಸಹಜವಾಗಿಯೇ ಧನ ಸಂಗ್ರಹವಾಗುತ್ತದೆ. ಪಕ್ಷ ,ಜಾತಿ ಭೇದ ಮರೆತು ಎಲ್ಲರೂ ಒಟ್ಟಾಗಿ ಸೇರಿ ತಾಯಿ ಉಮಾಮಹೇಶ್ವರಿಯ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಶ್ರಮಿಸೋಣವೆಂದು ಕರೆ ನೀಡಿದರು.

ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ ಶೇಖರ್ ಅವರು ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಉಮಾಮಹೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕರಾದ ಪರಮೇಶ್ವರ ಜೋಷಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಭಟ್ನಗರ, ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಅತ್ತಾವರ, ಕೋಶಾಧಿಕಾರಿ ಟಿ.ರಘುರಾಮ್ ಶೆಟ್ಟಿ, ಮೊಕ್ತೇಸರರಾದ ಈಶ್ವರ್ ಉಳ್ಳಾಲ್, ನಿರ್ಮಲ ಕುಂಞಾಬು, ಮಹಾಲಿಂಗ, ಡಾ| ರಾಮಕೃಷ್ಣ ಶೆಟ್ಟಿ, ಕೂಸಪ್ಪ ಗಟ್ಟಿ,ಉಮಾಮಹೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಕೆ.ಟಿ ಸುವರ್ಣ, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಉಪಾಧ್ಯಕ್ಷ ಸತೀಶ್ ಕರ್ಕೇರ, ಪ್ರಶಾಂತ್ ಕಾಪಿಕಾಡು, ಕಾರ್ಯಾಲಯ ಸಮಿತಿಯ ಗೌರವಾಧ್ಯಕ್ಷ ಸುರೇಂದ್ರ ನಾಯಕ್, ವೈಧಿಕ ಸಮಿತಿಯ ಕಿಶೋರ್ ಭಟ್ ಹೂಹಾಕುವ ಕಲ್ಲು, ಪ್ರಚಾರ ಸಮಿತಿಯ ಅಧ್ಯಕ್ಷ ಜಗದೀಶ್ ಆಚಾರ್ಯ, ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಕೋಶಾಧಿಕಾರಿ ಆನಂದ ಶೆಟ್ಟಿ ಭಟ್ನಗರ, ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟ್ಟು, ಪ್ರಜ್ವಲ್ ಗಟ್ಟಿ ಕಾಪಿಕಾಡು, ಸ್ವಾಗತ ಸಮಿತಿ ಸಂಚಾಲಕರಾದ ಜಯಂತ್ ಕಾಪಿಕಾಡು ಮೊದಲಾದವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಮಾಮಹೇಶ್ವರಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡು ಸ್ವಾಗತಿಸಿ, ನಿರೂಪಿಸಿದರು.

Exit mobile version