Site icon Ullalavani

ಬೆಂಗಳೂರಿನಿ0ದ ಮಂಗಳೂರು ಉಡುಪಿ ಮತ್ತು ಕಾರವಾರಕ್ಕೆ ವಂದೇ ಭಾರತ್ ರೈಲು

ಉಡುಪಿ;ಹಾಸನ ಸಕಲೇಶಪುರ ವಿಭಾಗಗಳಲ್ಲಿ ವಿದ್ಯುದೀಕರಣ ಕಾರ್ಯ ಪೂರ್ಣಗೊಂಡ ನಂತರ ಬೆಂಗಳೂರಿನಿAದ ಮಂಗಳೂರು, ಉಡುಪಿ ಮತ್ತು ಕಾರವಾರಕ್ಕೆ ವಂದೇ ಭಾರತ್ ಎಕ್ಸ÷್ಸ ಪ್ರೆಸ್ ಅನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎ0ದು ಕೇಂದ್ರ ರೈಲ್ವೇ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ನವದೆಹಲಿಯಲ್ಲಿ ರೈಲ್ವೇ ಸಚಿವರನ್ನು ಭೇಟಿಯಾಗಿ ಈ ಸಂಬ0ದ ಒಂದು ಮನವಿ ಪತ್ರವನ್ನು ಸಲ್ಲಿಸಿ ,ಈ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಓಡಿಸುವ ಅಗತ್ಯವನ್ನು ವಿವರಿಸಿದರು.

ಮನವಿಗೆ ಸ್ಪಂದಿಸಿದ ರೈಲ್ವೇ ಸಚಿವರು, ಸಕಲೇಶಪುರ ಘಾಟ್ ವಿಭಾಗದಲ್ಲಿ ರೈಲ್ವೇ ಹಳಿ ವಿದ್ಯುದೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನಿAದ ಕಾರವಾರಕ್ಕೆ ರೈಲು ಸೇವೆಗಳನ್ನು ಸುಧಾರಿಸಲಾಗುವುದು. ಮತ್ತು ಈ ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಪರಿಚಯಿಸುವ ಯೋಜನೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

Exit mobile version