Site icon Ullalavani

ಅಮ್ಮ ಜ್ಯುವೆಲ್ಲರ್ಸ್ ನಿಂದ ‘ಅಮ್ಮ ಶ್ರೀ ರಕ್ಷಾ ನಿಧಿ’; ಗ್ರಾಹಕರಿಗೆ ಸುಲಭ ಕಂತು ಯೋಜನೆ

ಮಂಗಳೂರು: ಗ್ರಾಹಕರಿಗೆ ನಗುಮೊಗದ ಸೇವೆಗಳನ್ನು ನೀಡುತ್ತಾ ಬಂದಿರುವ ಅಮ್ಮ ಜ್ಯುವೆಲ್ಲರ್ಸ್, ಮಂಗಳೂರು (ಅಮ್ಮ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು) ಸಂಸ್ಥೆಯು ಶ್ರೀ ದೇವಿಯ ಅನುಗ್ರಹ ಹಾಗೂ ಗ್ರಾಹಕ ಬಂಧುಗಳ ಪ್ರೋತ್ಸಾಹದಿಂದ ತನ್ನ ಸೇವೆಯ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಈ ಮಹತ್ವದ ಸಂದರ್ಭದಲ್ಲಿ ಗ್ರಾಹಕರು, ಸದಸ್ಯರು ಹಾಗೂ ಹಿತೈಷಿಗಳ ಸೇವಾಬದ್ಧತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ‘ಅಮ್ಮ ಶ್ರೀ ರಕ್ಷಾ ನಿಧಿ’ ಎಂಬ ವಿನೂತನ ಪರಸ್ಪರ ಸಹಾಯಕ ಯೋಜನೆಯನ್ನು ಸಂಸ್ಥೆ ಪರಿಚಯಿಸಿದೆ.

ಈ ಯೋಜನೆಯಡಿ ಸುಲಭ ಕಂತು ವ್ಯವಸ್ಥೆ ಒದಗಿಸಲಾಗಿದ್ದು, ಒಟ್ಟು ಪಾವತಿ ರೂ. 11,000 ಆಗಿರುತ್ತದೆ. ಗ್ರಾಹಕರು ಈ ಮೊತ್ತವನ್ನು ಒಂದೇ ಕಂತಿನಲ್ಲಿ ಅಥವಾ 11 ಕಂತುಗಳಲ್ಲಿ ಪಾವತಿಸುವ ಅವಕಾಶವಿದೆ. ಈ ಯೋಜನೆಯ ಮೂಲಕ ಕನಿಷ್ಠ ರೂ. 25,000/- ರಿಂದ ಗರಿಷ್ಠ ರೂ. 50,000/- ವರೆಗೆ ಪ್ರಯೋಜನವನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448261091, 9844706865, 7760215601, 9008502919

Exit mobile version