ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳಿಯ- ಉಳ್ಳಾಲ ಸಮಾಜದ ವತಿಯಿಂದ ವರ್ಷಂಪ್ರತಿಯ0ತೆ ನಡೆಸಿಕೊಂಡು ಬರುತ್ತಿರುವ ಸೋಮೇಶ್ವರ ಶ್ರೀ ಸೋಮನಾಥ ದೇವರಿಗೆ ಸಿಯಾಳ ಅಭಿಷೇಕ ಡಿ.15ರಂದು ನೆರವೇರಲಿದೆ.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10;30ಕ್ಕೆ ಸಿಯಾಳ ಅಭಿಷೇಕ ನಡೆದು ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, ಪ್ರಸಾದ ನಡೆದು ಬಳಿಕ ಅನ್ನಸಂತರ್ಪಣೆ ಮೂಲಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
