ಮಂಗಳೂರು; ಮೊಗವೀರ್ಸ್ ಬಹ್ರೇನ್ ವತಿಯಿಂದ ಡಿ.14ರಂದು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವಠಾರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆಗೊಂಡಿದೆ.
ಕಾರ್ಯಕ್ರಮದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ನಾಡೋಜ ಡಾ| ಜಿ.ಶಂಕರ್, ದ.ಕ ಮತ್ತು ಉಡುಪಿ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಉರ್ವದ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷö್ಮಣ್ ಅಮೀನ್ ಕೋಡಿಕಲ್, ಉದ್ಯಮಿ ಮೋಹನ್ ಬೆಂಗ್ರೆ ಮಂಗಳೂರು, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾದ ವರದರಾಜ ಬಂಗೇರ, ಮಂಗಳೂರು ದಕ್ಷಿಣದ ಬಿಜೆಪಿ ಉಪಾಧ್ಯಕ್ಷರಾದ ಗೌತಮ್ ಸಾಲ್ಯಾನ್ ಕೋಡಿಕಲ್, ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಚೇತನ್ ಬೆಂಗ್ರೆ, ಮೊಗವೀರ್ಸ್ ಬಹ್ರೇನ್ ಅಧ್ಯಕ್ಷೆ ಶಿಲ್ಪ ಶಮಿತ್ ಕುಂದರ್, ಉಪಾಧ್ಯಕ್ಷರಾದ ವಿನೋದ್ ಶ್ರೀಯಾನ್, ಕಾರ್ಯದರ್ಶಿಯಾದ ಸುಮನ್ ಸುವರ್ಣ ಭಾಗಿಯಾಗಲಿದ್ದಾರೆ.