Site icon Ullalavani

ಪಿಲಿಪಂಜ’ ಸಿನಿಮಾದ ಪ್ರೀಮಿಯರ್ ಶೋ ಸಕ್ಸಸ್; ಡಿ.12ರಂದು ಬಿಡುಗಡೆ

ದೇರಳಕಟ್ಟೆ: ಸಿನಿಮಾಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಪಿಲಿಪಂಜ' ತುಳು ಚಿತ್ರದ ಪ್ರೀಮಿಯರ್ ಶೋ ದೇರಳಕಟ್ಟೆಯ ಭಾರತ್ ಸಿನಿಮಾಸ್‌ನಲ್ಲಿ ನಡೆಯಿತು.


ಡಿ.12ರಂದುಪಿಲಿಪಂಜ’ ತುಳು ಸಿನಿಮಾ ಅಬ್ಬರಿಸಲಿದ್ದು, ಈಗಾಗಲೇ ಚಿತ್ರದ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ.

ಹಾಸ್ಯನಟ ಭೋಜರಾಜ್ ವಾಮಂಜೂರು ಮಾತನಾಡಿ, ಪಿಲಿಪಂಜ ಸಿನಿಮಾ ಭರತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದ್ದು, ಸಿನಿಪ್ರೇಕ್ಷಕರು ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹಿಸಿ ಎಂದರು.

ಚಿತ್ರದ ನಿರ್ದೇಶಕ ಭರತ್ ಶೆಟ್ಟಿ ಮಾತನಾಡಿ, ಪುತ್ತೂರು, ಮಂಗಳೂರು, ದೇರಳಕಟ್ಟೆಯಲ್ಲಿ ಪ್ರೀಮಿಯರ್ ಶೋ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರು ಮೊದಲ ವಾರದಲ್ಲೇ ಸಿನಿಮಾವನ್ನು ವೀಕ್ಷಿಸಿ, ತುಳು ಚಿತ್ರವನ್ನು ಬೆಳೆಸಿ ಎಂದರು.

ನಿರ್ಮಾಪಕ ಪ್ರತೀಕ್ ಯು.ಪೂಜಾರಿ ಕಾವೂರು ಮಾತನಾಡಿ, ಪಿಲಿಪಂಜ ಚಿತ್ರದ ಕಥೆ ತುಳುನಾಡಿನ ಮಣ್ಣಿನ ಕಥನವನ್ನು ಒಳಗೊಂಡಿದ್ದು, ವಿಭಿನ್ನ ರೀತಿಯ ತಂಡದ ಪ್ರಯತ್ನಕ್ಕೆ ಆರ್ಶೀವದಿಸಿ, ಬುಕ್ ಬೈ ಶೋನಲ್ಲಿ ಟಿಕೆಟ್ ಬುಕ್ ಮಾಡಿ ಮೊದಲ ವಾರದಲ್ಲೇ ಪಿಲಿಪಂಜ ವೀಕ್ಷಿಸಿ ಎಂದು ಹೇಳಿದ್ದಾರೆ.

ಪ್ರತೀಕ್ ಯು.ಪೂಜಾರಿ ಕಾವೂರು ನಿರ್ಮಾಣದ ಪಿಲಿಪಂಜ ಚಿತ್ರಕ್ಕೆ ಭರತ್ ಶೆಟ್ಟಿ ನಿರ್ದೇಶನವಿದೆ. ರಮೇಶ್ ರೈ ಕುಕ್ಕುವಳ್ಳಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಎಸ್.ಬಿ.ಗ್ರೂಪ್ ಪ್ರಸ್ತುತ ಪಡಿಸುವ ಶಿಯಾನಾ ಪ್ರೊಡಕ್ಷನ್ ಹೌಸ್ ನಿರ್ಮಾಣದ ಈ ಸಿನಿಮಾದಲ್ಲಿ ಭೋಜರಾಜ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವ ಪ್ರಕಾಶ್ ಪೂಂಜಾ ಹರೇಕಳ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ಭಾಸ್ಕರ ಮಣಿಪಾಲ, ರೂಪಾ ವರ್ಕಾಡಿ, ಜಯಶೀಲ ಸೇರಿದಂತೆ ತಾರಾ ಬಳಗವೇ ಈ ಚಿತ್ರದಲ್ಲಿದೆ.

Exit mobile version