Site icon Ullalavani

ತಾಯಿಯ ಕಾರಿನಲ್ಲಿ ಹೊರಟ ಯುವಕ ನಾಪತ್ತೆ…!!

ಮಂಗಳೂರು: ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರ ನೀಡಿ ಬರುತ್ತೇನೆಂದು ಹೇಳಿ ಮನೆಯಿಂದ ತನ್ನ ತಾಯಿಯ ಕಾರಿನಲ್ಲಿ ಹೊರಟು ಬಂದಿದ್ದ ರಕ್ಷಣ್ ಜೆ.ಕೆ. (32) ಎಂಬವರು ಡಿ.6ರಿಂದ ಕಾಣೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಈ ಕಾರು ಅಂದು ರಾತ್ರಿ 10:30ಕ್ಕೆ ನಗರದ ಟೌನ್‌ಹಾಲ್ ಬಳಿ ಪತ್ತೆಯಾಗಿದೆ. ಸುಮಾರು 5.8 ಅಡಿ ಎತ್ತರದ, ಸಧೃಡ ಶರೀರದ, ಗೋಧಿ ಮೈ ಬಣ್ಣದ ರಕ್ಷಣ್ ಕಾಣೆಯಾದ ದಿನ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು.

ತುಳು ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ ಎಂದು ಪ್ರಕರಣ ದಾಖಲಿಸಿದ ಪೊಲೀಸರು ತಿಳಿಸಿದ್ದಾರೆ.

Exit mobile version