Site icon Ullalavani

ದೈಗೋಳಿ ರಿಕ್ಷಾ ಚಾಲಕರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸನ್ಮಾನ

ಸಾಯಿನಿಕೇತನ ಸೇವಾಶ್ರಮ ದೈಗೋಳಿ ಆಶ್ರಮದ ನೂತನ ಕಟ್ಟಡದ ವಠಾರದಲ್ಲಿ ನಡೆದ ಪಾವಂಜೆ ಯಕ್ಷಗಾನ ಮೇಳದ ಪ್ರದರ್ಶನದ ಸಂದರ್ಭದಲ್ಲಿ ದೈಗೋಳಿ ರಿಕ್ಷಾ ಚಾಲಕರಿಗೆ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ದೈಗೋಳಿ ರಿಕ್ಷಾ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು, ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಅವರ ಆರೋಗ್ಯ ವನ್ನು ಲೆಕ್ಕಿಸದೆ, ರಾತ್ರಿ ಹಗಲೆನ್ನದೆ ರೋಗಿಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತಿದ್ದರು.ಆಶ್ರಮವಾಸಿಗಳು ಕಣ್ತಪ್ಪಿಸಿ ಹೋದ ಸಂದರ್ಭದಲ್ಲಿ ಪುನಃ ಕರೆತರುವುದು, ಕರೆ ಮೂಲಕ ಮಾಹಿತಿ ನೀಡುವುದು. ರಸ್ತೆ ಬದಿಯಲ್ಲಿರುವ ನಿರ್ಗತಿಕರನ್ನು ಆಶ್ರಮಕ್ಕೆ ಕರೆತಂದು ಬಿಡುವುದರ ಮೂಲಕ ಆಶ್ರಮದ ಸೇವಾಕಾರ್ಯಗಳಲ್ಲಿ ಕೈ ಜೋಡಿಸುತ್ತಿದ್ದರು. ಇದೇ ರೀತಿಯ ಯಾವುದೇ ಪರಿಸ್ಥಿತಿಯಲ್ಲಿ ಸಂಕೋಚ ಇಲ್ಲದೆ ನಿಸ್ವಾರ್ಥವಾಗಿ ಸೇವೆಯನ್ನು ಮಾಡಿರುತ್ತಾರೆ. ಈ ಸೇವಾಕಾರ್ಯಗಳನ್ನು ಗುರುತಿಸಿ ಇವರನ್ನು ಅಭಿನಂದಿಸಲಾಯಿತು.

Exit mobile version