Site icon Ullalavani

ಬಗಂಬಿಲದಲ್ಲಿ ಬೃಹತ್ ರಕ್ತದಾನ ಶಿಬಿರ,ಉಚಿತ ಕಣ್ಣಿನ ತಪಾಸಣಾ ಶಿಬಿರ

ಉಳ್ಳಾಲ: ಡಿ-08;ಕುಂಪಲ ಬಗಂಬಿಲ ಹಿಂದೂ ನಗರದ ಹಿಂದೂ ಯುವಸೇನೆ ಶ್ರೀ ಮಹಾದೇವಿ ಶಾಖೆಯ ವತಿಯಿಂದ ಗುಣಕರ ಶೆಟ್ಟಿಯವರ ಸ್ಮರಣಾರ್ಥವಾಗಿ, ಲಯನ್ಸ್ ಕ್ಲಬ್ ಕದ್ರಿ, ಮಂಗಳೂರು ಇವರ ಸಹಕಾರದೊಂದಿಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಆಸ್ಪತ್ರೆಯ ಸಹಯೋಗದೊಂದಿಗೆ ಬಗಂಬಿಲ ಫ್ರೆಂಡ್ಸ್ ಸರ್ಕಲ್ ಮೈದಾನದಲ್ಲಿ ಭಾನುವಾರದಂದು ಬೃಹತ್ ರಕ್ತದಾನ ಶಿಬಿರ,ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.



ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷರಾದ ಭಾಸ್ಕರ ಚಂದ್ರ ಶೆಟ್ಟಿ ಕಾರ್ಯಕ್ರಮ‌ ಉದ್ಘಾಟಿಸಿದರು.
ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯಶೋಧರ ಚೌಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ. ಉದ್ಯಮಿ ಪ್ರವೀಣ್ ಸುವರ್ಣ ಬಗಂಬಿಲ, ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷರಾದ ಕೆ.ಸಂಜೀವ ಗೌಡ ,ಯೆನೆಪೋಯ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾದ ಅನುಷ್ ,ಶಿಬಿರ ಸಂಯೋಜಕರಾದ ಅಬ್ದುಲ್ ರಝಾಕ್,ಕೋಟೆಕಾರು ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಐ ಬಗಂಬಿಲ, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಜಿಲ್ಲಾ ಕಾರ್ಯದರ್ಶಿ ರವಿಚಂದ್ರ ಎಕ್ಕೂರು,ಮಂಗಳೂರು ಗ್ರಾಮ ವಿಕಾಸ ವಿಭಾಗದ ಟಾಲಿ ಸದಸ್ಯರಾದ ರವಿಚಂದ್ರ ಕುಂಪಲ,ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಆಕಾಶ್ ಶೆಟ್ಟಿ ಉಳ್ಳಾಲ ,ಉದ್ಯಮಿಗಳಾದ ಕೀರ್ತನ್ ತುಡರ್, ಬಗಂಬಿಲ, ಧಿತಿರಾಜ್ ಶೆಟ್ಟಿ ಶಕ್ತಿನಗರ, ಹಿಂದೂ ಯುವಸೇನೆ ಮಹಾದೇವಿ ಶಾಖೆಯ ಗೌರವಾಧ್ಯಕ್ಷರಾದ ಉದಯರಾಜ್ ಶೆಟ್ಟಿ,ಬಗಂಬಿಲ ಅಧ್ಯಕ್ಷರಾದ ಪ್ರವೀಣ್ ದಾಸ್ ಬಗಂಬಿಲ ಮೊದಲಾದವರು ಉಪಸ್ಥಿತರಿದ್ದರು. ಸ್ಕಂದನ, ಶಾನ್ವಿತ,ತನಿಷ್ಕ,ಧ್ರುವಿ, ಲಿಶಿತ ಪ್ರಾರ್ಥಿಸಿದರು.
ವಿಜೆ ಹರಿಪ್ರಸಾದ್, ಬಗಂಬಿಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Exit mobile version