ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಸಮಾಜದಲ್ಲಿ ಸಂಘಟನೆಗಳಿದ್ದು ಸಮಾಜಮುಖಿಯಾಗಿ ಕೆಲಸ ಮಾಡುವ ಸಂಘಟನೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಆ ದಿಸೆಯಲ್ಲಿ ಭಗತ್‍ಸಿಂಗ್ ಸೇವಾ ಪ್ರತಿಷ್ಠಾನ ಸೇವೆಯ ಮೂಲಕವೇ ಜನಪ್ರಿಯ ಸಂಘನಟಯಾಗಿ ಬೆಳೆದಿರುವುದು ಶ್ಲಾಘನೀಯ ಎಂದು ಸುವರ್ಣ ಅಸೋಸಿಯೇಟ್ಸ್‍ನ ಕೆ.ಟಿ.ಸುವರ್ಣ ಅಭಿಪ್ರಾಯಪಟ್ಟರು.
ಅವರು ಭಗತ್‍ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು ಹಾಗೂ ಮಾಧ್ಯಮ ಕೇಂದ್ರ ಉಳ್ಳಾಲ ಜಂಟಿ ಆಶ್ರಯದಲ್ಲಿ ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜಭವನದಲ್ಲಿ ಭಾನುವಾರ ನಡೆದ ವಿಕಾಸ-2015ರಲ್ಲಿ ವ್ಯಕ್ತಿತ್ವ ವಿಕಸನ-ನಾಯಕತ್ವ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸರ್ವಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ದಿನಕರ್ ಶೆಟ್ಟಿ ಮಾತನಾಡಿ ಮೂಲವನ್ನು ಯಾವತ್ತೂ ಮರೆಯಬಾರದು. ಜೀವನದಿ ನೇತ್ರಾವತಿ ಕೈ ತಪ್ಪಿ ಹೋಗಬಾರದು. ರಾಜ್ಯದ ಜನತೆಯಿಂದ ಕೋಟ್ಯಾಂತರ ರೂ. ತೆರಿಗೆ ಕೇಳುವ ಸರಕಾರ ಯಾವುದಾದರೂ ಯೋಜನೆ ಕೈಗೊಳ್ಳುವಾಗ ಜನರ ಮಾತಿಗೆ ಬೆಲೆ ಕೊಡದಿದ್ದರೆ ಅದು ದುರಂತ. ಆ ನಿಟ್ಟಿನಲ್ಲಿ ಎತ್ತಿನಹೊಳೆ ಯೋಜನೆಯನ್ನು ಎಲ್ಲರೂ ಒಂದಾಗಿ ವಿರೋಧಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಕೋಟಕ್ ಮಹೇಂದ್ರ ಲಿ. ಸಂಸ್ಥೆಯ ಅರುಣ್ ಕುಮಾರ್ ಶೆಟ್ಟಿ, ಎಸ್‍ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿ ಮಹೇಶ್ ಕೆ., ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರವೀಣ್ ಎಸ್. ಕುಂಪಲ, ಪತ್ರಕರ್ತರಾದ ಸತೀಶ್ ಕುಮಾರ್ ಪುಂಡಿಕಾೈ ಹಾಗೂ ವಸಂತ ಎನ್. ಕೊಣಾಜೆ ಉಪಸ್ಥಿತರಿದ್ದರು.
ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ಕೃಷ್ಣ ಪೆÇನ್ನತ್ತೋಡು ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕೊಲ್ಯ ವಂದಿಸಿದರು.
ಬಳಿಕ ನಡೆದ ವಿವಿಧ ಗೋಷ್ಠಿಯಲ್ಲಿ ವ್ಯಕ್ತಿತ್ವ ವಿಕಸನ ಕುರಿತಾಗಿ ವಿಜಯ ಕರ್ನಾಟಕ ದಿನಪತ್ರಿಕೆಯ ಮುಖ್ಯ ಉಪ ಸಂಪಾದಕ ಕೆ. ಕೃಷ್ಣ ಭಟ್, ನಾಯಕತ್ವ ಮತ್ತು ಬೌದ್ಧಿಕ ವಿಕಾಸ ಕುರಿತಾಗಿ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ, ಸಮಾಜಕ್ಕೆ ಪೂರಕ ರಂಗಕಲೆ ಕುರಿತಾಗಿ ರಂಗನಿರ್ದೇಶಕ ಜಗನ್‍ಪವಾರ್ ಬೇಕಲ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಪೆÇಸಕುರಲ್ ಚಾನಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಅಬ್ಬಕ್ಕ ಚಾನಲ್ ನಿರ್ದೇಶಕ ಶಶಿಧರ್ ಪೆÇಯ್ಯತ್ತಬೈಲ್, ವಿಜಯವಾಣಿ ಪ್ರತಿಕೆಯ ವರದಿಗಾರ ಅನ್ಸಾರ್ ಇನೋಳಿ, ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಕಾಶ್ ಸಿಂಪೆÇೀನಿ, ಸಂಘಟನಾ ಕಾರ್ಯದರ್ಶಿ ಹರೀಶ್ ಅಂಬ್ಲಮೊಗರು, ಸಲಹೆಗಾರ ಆನಂದ ಕೆ. ಅಸೈಗೋಳಿ, ಕೋಶಾ„ಕಾರಿ ರಾಕೇಶ್ ಬೈಪಾಸ್ ಉಪಸ್ಥಿತರಿದ್ದರು