Site icon Ullalavani

ಲಯನ್ಸ್ ಕ್ಲಬ್ ಸೋಮೇಶ್ವರದ ವತಿಯಿಂದ ಮದುಮೇಹ ಜಾಗ್ರತಿ ಶಿಬಿರ

ಉಳ್ಳಾಲ: ಲಯನ್ಸ್ ಕ್ಲಬ್ ಸೋಮೇಶ್ವರದ ವತಿಯಿಂದ ವಿಶ್ವ ಮದುಮೇಹ ದಿನದ ಅಂಗವಾಗಿ ಏಡೆಡ್ ಹೋಲಿ ಏಂಜಲ್ಸ್ ಹೈಯರ್ ಪ್ರೈಮರಿ ಶಾಲೆ ಮತ್ತು ಸಂತ ಸೆಬಸ್ಟಿಯನ್ ಪ್ರೌಢ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮದುಮೇಹ ಜಾಗ್ರತ ಶಿಬಿರವನ್ನು ಜಂಟಿಯಾಗಿ ಆಯೋಜಿಸಲಾಗಿತ್ತು.

ಕ್ಲಬ್ ಚಾರ್ಟರ್ ಅಧ್ಯಕ್ಷ ಭಾರತೀಯ ನೌಕಾಪಡೆಯ ವೆಟರನ್ ಲಯನ್ ಕೆ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಲಯನ್ ಅರವಿಂದ್ ಶೆಣೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,ಶಾಲೆಯಲ್ಲಿ ಶುಗರ್ ಬೋರ್ಡನ್ನು ಸ್ಥಾಪಿಸಿದರು.

ಬಳಿಕ ಮಾತನಾಡಿದ ಇವರು, ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ಮಧುಮೇಹದ ಬಗ್ಗೆ ವಿಶ್ವಾಸಾರ್ಹ ಜ್ಞಾನವನ್ನು ಒದಗಿಸುವಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ನಿರ್ಣಾಯಕವಾಗಿವೆ ಎಂದು ಹೇಳಿದರು.

ಕಮಾಂಡರ್ ಲಯನ್ ವಿಜಯಕುಮಾರ mರಿಜಿ ಮತ್ತು ಡಾ. ಚಿರಾಗ್ ಗೋಪಿನಾಥ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಮಧುಮೇಹದ ಲಕ್ಷಣಗಳು, ಕಾರಣಗಳು, ತಡೆಗಟ್ಟುವ ಕ್ರಮಗಳು ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ಪ್ರಮುಖರಾದ ಕ್ಯಾಬಿನೆಟ್ ಖಜಾಂಚಿ ಲಯನ್ ಬಾಲಕೃಷ್ಣ ಹೆಗ್ಡೆ,ಚಾರ್ಟರ್ ಖಜಾಂಚಿ ಲಯನ್ ಎಂಜಿನಿಯರ್ ನಿತೀಶ್ ಕೃಷ್ಣ, ಸಬ್ ಲೆಫ್ಟಿನೆಂಟ್ ಲಯನ್ ಶಶಿಕುಮಾರ್ ನಾಯರ್, ರಾಜಶ್ರೀ ನಾಯರ್, ನಿರ್ಮಿತಾ ಭಂಡಾರಿ, ಡಾ. ಅನುರೂಪ ಹೆಗ್ಡೆ, ವಸಂತ ರೈ, ಫ್ಲೇವಿಯಾ ಡಿ’ಸೋಜಾ, ರಾಘವನ್ ಮೂತಲ್ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫಿಲೋಮಿನಾ ಸ್ವಾಗತಿಸಿದರು. ಕ್ಲಬ್ ಚಾರ್ಟರ್ ಕಾರ್ಯದರ್ಶಿ ಸುಬೆದಾರ್ ಮೇಜರ್ ಲಯನ್ ಕೆ. ಗೋಪಿನಾಥ್ ಧನ್ಯವಾದಗೈದರು.

ಈ ಶಿಬಿರವು ವಿದ್ಯಾರ್ಥಿಗಳಲ್ಲಿ ಮಧುಮೇಹ ಜಾಗೃತಿ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಉತ್ತೇಜಿಸುವ ಅತ್ಯುತ್ತಮ ಕಾರ್ಯಕ್ರಮವಾಗಿ ಬೆಳಗಿತು. ಇದರ ಜೊತೆಗೆ ಆಸುಪಾಸಿನ ಶಾಲೆಗಳಲ್ಲಿ ಶುಗರ್ ಬೋರ್ಡನ್ನು ಕ್ಲಬ್ ವತಿಯಿಂದ ಸ್ಥಾಪಿಸಲಾಯಿತು.

Exit mobile version