Site icon Ullalavani

ಮಸೀದಿಗೆಂದು ತೆರಳಿದ ವ್ಯಕ್ತಿ; ಮನೆಗೆ ಬಾರದೆ ನಾಪತ್ತೆ..!

ಉಳ್ಳಾಲ: ಮಸೀದಿಗೆಂದು ತೆರಳಿದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪುತ್ರಿ ದೂರು ದಾಖಲಿಸಿದ್ದಾರೆ.



ಅಬ್ದುಲ್‌ ಆಸೀಫ್‌ (೪೭) ನಾಪತ್ತೆಯಾದವರು. ವಿದೇಶದಲ್ಲಿ ಆರ್ಟಿಸ್ಟ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ೮ ದಿನಗಳ ಹಿಂದೆ ಮನೆಗೆ ಬಂದು ಮನೆಯಲ್ಲಿದ್ದವರು ನ.೨೮ ರಂದು ದಾರಂದಬಾಗಿಲು ಮಸೀದಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪುತ್ರಿ ರೀಮಾ ಫಾತಿಮ ಎಂಬವರು ನೀಡಿರುವ ದೂರಿನ ಆಧಾರದಡಿ ನಾಪತ್ತೆ ದೂರು ದಾಖಲಾಗಿದೆ. ಇಬ್ಬರು ಪುತ್ರಿಯರು ಹಾಗೂ ಪತ್ನಿ ಜೊತೆಗೆ ಅಬ್ದುಲ್‌ ಆಸೀಫ್‌ ವಾಸಿಸುತ್ತಿದ್ದರು.

Exit mobile version