ಉಳ್ಳಾಲ : ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಇಲ್ಲಿ ಪ್ರತಿವಾರ ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ನ. 26 ವಾರ್ಷಿಕ ಕಾರ್ಯಕ್ರಮ ನವೆಂಬರ್ 30 ರವಿವಾರ ಸಂಜೆ 7 ಗಂಟೆಗೆ ಮಸೀದಿ ಅಧ್ಯಕ್ಷ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ ಮಸೀದಿ ವಠಾರದಲ್ಲಿ ಜರಗಿತು.
ಹಮೀದ್ ಫೈಝಿ ಖತೀಬರು 407,ಜುಮಾ ಮಸೀದಿ ಉಚ್ಚಿಲ ಉದ್ಘಾಟಿಸಿದರು ಮುನೀರ್ ಸಖಾಫಿ ಕೆ ಸಿ ರೋಡ್ ಪ್ರಾಸ್ತಾವಿಕ ಭಾಷಣ ಮಾಡಿದರು, ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಮಾತನಾಡಿದರು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಸ್ವಲಾತ್ ನೇತೃತ್ವ ಹಾಗೂ ಮುಖ್ಯ ಬಾಷಣ ಮಾಡಿದರು, ವೇದಿಕೆಯಲ್ಲಿ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ನೌಫಲ್ ಅಹ್ಸನಿ ಮದರಸ ಸದರ್, ಶಕೂರ್ ಸಅದಿ ಮಹಧ್ಸಿನ್, ಫಾರೂಕ್ ಸಅದಿ ಕೊಮರಂಗಳ, ಉಮರಬ್ಬ ಮಂಗಳೂರು, ಎನ್ ಎಸ್ ಉಮರ್ ಮಾಸ್ಟರ್, ಅಬ್ಬಾಸ್ ಹಾಜಿ ಕೆ ಸಿ ರೋಡ್,ಬಾವ ಹಾಜಿ ಪಿಲಿಕೂರ್
ಕೆ ಎಮ್ ಫಾರೂಕ್ ಬಟ್ಟಪ್ಪಾಡಿ ಇನ್ನಿತರ ಉಲಮ ಉಮರಾ ನೇತಾರರು, ಭಾಗವಹಿಸಿದ್ದರು, ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್, ವಂದಿಸಿದರು,
