Site icon Ullalavani

ಕುತ್ತಾರ್ ಪದವು ಅಂಗನವಾಡಿಯಲ್ಲಿ LKG UKG ಆರಂಭ

ಕರ್ನಾಟದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ “ಸುವರ್ಣ ಮಹೋತ್ಸವ” ಈ ಕಾರ್ಯಕ್ರಮದ ಪ್ರಯುಕ್ತ ಕುತ್ತಾರ್ ಪದವು ಅಂಗನವಾಡಿ ಯಲ್ಲಿ LKG UKG ತರಗತಿಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದಿಂದ, ಇಲಾಖೆಗೆ ನೀಡಿದ ಆದೇಶದ ಅನ್ವಯ, ಇವತ್ತು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನ್ನೂರು ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪೆಲಿಮಾರ್ ವಹಿಸಿದ್ದು ಉದ್ಘಾಟಕರಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಕಾಂತ್ ಸಂಪಿಗೇರ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಕಿಶೋರ್, ವನಿತಾ,ಶಾಲಾ ಮುಖ್ಯಶಿಕ್ಷಕಿ ಪ್ರಮೀಳಾ ಡಿಸೋಜ, ಪಂಚಾಯತ್ ಕಾರ್ಯದರ್ಶಿ ಶಾಂತಿ, ಪೆರ್ಮನ್ನೂರು ವಲಯದ ಮೇಲ್ವಿಚಾರಕಿ ಶಂಕರಿ, ಪಂಚಾಯತ್ ಮಾಜಿ ಅಭಿವೃದ್ಧಿ ಆಧಿಕಾರಿ ರವೀಂದ್ರ ರಾಜೀವ್ ನಾಯಕ, ಬಾಲವಿಕಾಸ ಅಧ್ಯಕ್ಷೆ ಚಾಂದಿನಿ ಕಾರ್ಯಕ್ರಮದ ನಿರೂಪಣೆ ಅಂಗನವಾಡಿ ಕಾರ್ಯಕರ್ತೆ ಸುನೀತಾ ಗಟ್ಟಿ ಮಾಡಿದರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಶಂಕರಿ ಇವರು ನೆರವೇರಿಸಿದರು.

ಕಾರ್ಯಕ್ರಮಕ್ಕೆ ಮುನ್ನೂರಿನ ಕಾರ್ಯಕರ್ತೆಯರಾದ ಶಕುಂತಲಾ, ವನಿತಾ, ತೆರೆಸಾ, ಯಶೋದ ಹಾಗೂ ಆಶಾ ಕಾರ್ಯಕರ್ತೆ ಅನಿತಾ ಉಪಸ್ಥಿತರಿದ್ದರು.

Exit mobile version