Site icon Ullalavani

ಹುಟ್ಟು ಹೋರಾಟಗಾರ, ಬಿಜೆಪಿ ಸಕ್ರಿಯ ಕಾರ್ಯಕರ್ತ ಸೋಮಪ್ಪ ಕೋಟ್ಯಾನ್ ನಿಧನ

ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಂಟ್ವಾಳ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯರಾಗಿ ಜನಪ್ರಿಯರಾಗಿದ್ದ ಸೋಮಪ್ಪ ಕೋಟ್ಯಾನ್ ತುಂಬೆ ಅವರು ನಿಧನ ಹೊಂದಿದ್ದಾರೆ.



ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದ ಸೋಮಪ್ಪ ಹುಟ್ಟು ಹೋರಾಟಗಾರರಾಗಿ, ಬಿಜೆಪಿ ಜಿಲ್ಲಾ ಮಂಡಲದ ವಿವಿಧ ಜವಾಬ್ದಾರಿಯನನು ನಿಭಾಯಿಸಿದವರು. ಅನೇಕ ಸಂಘಸAಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಇವರು ಕಳೆದ 25 ವರ್ಷಗಳಿಂದ ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿಯಾಗಿ, ಬಿಲ್ಲವ ಸಮಾಜದ ಗುರಿಕಾರರಾಗಿ ಯುವ ಸಮುದಾಯದ ಮಾರ್ಗದರ್ಶಕರಾಗಿದ್ದರು.

ಅಲ್ಪಕಾಲದ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಎರಡು ಗಂದು, ಒಂದು ಹೆಣ್ಣು ಮಕ್ಕಳ ಸಹಿತ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.

Exit mobile version