ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಂಗಳೂರು ತಾಲೂಕು ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರಿನಲ್ಲಿ 455 ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸರು ಮತ್ತು ಅಧೀಕ್ಷಕರು ಆದ ಡಾ| ಶಿವ ಪ್ರಕಾಶ್ ಡಿ. ಎಸ್ ಹಾಗೂ ಡಾ. ಸದಾನಂದ ಪೂಜಾರಿ( HOD & Proffessor Urology) ಮತ್ತು ಡಾ. ಅವಿನಾಶ್ ಸಹಾಯಕ ಪ್ರಾಧ್ಯಪಕರು Urology ಮತ್ತು ಡಾ. ಅಭಿಷೇಕ್, ಡಾ| ಸುಬ್ರಮಣ್ಯ, ಪಿ ಆರ್ ಓ ನಿಕೇಶ್ ಕುಮಾರ್, ಡಾ| ರಾಘವೇಂದ್ರ ಪ್ರಕಾಶ್ ಕಾರಂತ್ ಮಾಜಿ ಗವರ್ನರ್ ರೋಟರಿ ಕ್ಲಬ್ ಮಂಗಳೂರು , ಆಶಿಕ್ ಕುಮಾರ್ ಜೈನ್ ಕೂಳೂರು ಬೀಡು, ರತ್ನಾಕರ ಜೈನ್ ಅಧ್ಯಕ್ಷರು ಜೈನ್ ಮಿಲನ್ ಮಂಗಳೂರು, ಶ್ರೀ.ಕ್ಷೇ.ಧ.ಗ್ರಾ.ಯೋ.ಬಿಸಿ ಟ್ರಸ್ಟ್ (ರಿ) ದ.ಕ -1 ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ ಹಾಗೂ ಮಂಗಳೂರು ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಗೀತಾ ಪ್ರವೀಣ್ , ನಿಕಟ ಪೂರ್ವ ಅಧ್ಯಕ್ಷರಾದ ಸತೀಶ್ ದೀಪಂ, ಮಂಗಳೂರು ತಾಲೂಕು ಭಜನಾ ಪರಿಷತ್‌ನ ಅಧ್ಯಕ್ಷರಾದ ಶ್ರೀ ಉಮೇಶ್ ಗಟ್ಟಿ, ತಾಲೂಕಿನ ಎಲ್ಲಾ ಒಕ್ಕೂಟದ ಪಧಾಧಿಕಾರಿಗಳು ಹಾಗೂ ಶ್ರೀ. ಕ್ಷೇ. ಧ.ಗ್ರಾ.ಯೋ. ಬಿಸಿ ಟ್ರಸ್ಟ್ ಮಂಗಳೂರು ತಾಲೂಕಿನ ಸಮಸ್ತ ಸಿಬ್ಬಂದಿ ವರ್ಗದವರು , ಸರಕಾರಿ ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು.